ರಾಯಪುರ ವಾರ್ಡ್‍ನಲ್ಲಿ ಲ್ಯಾಬ್ ತೆರೆಯಲು ವಿರೋಧ

Update: 2020-05-13 17:26 GMT

ಬೆಂಗಳೂರು, ಮೇ 13: ಕೊರೋನ ಹಾಟ್‍ಸ್ಪಾಟ್ ಆಗಿರುವ ಪಾದರಾಯನಪುರದಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದ್ದು ಅದಕ್ಕಾಗಿ ಒಂದು ಲ್ಯಾಬ್ ಅನ್ನು ಪಾದರಾಯನಪುರ ರಾಯಪುರ ವಾರ್ಡ್‍ನಲ್ಲಿ ತೆರೆಯಲು ಸಿದ್ಧತೆ ನಡೆಸಿದೆ. ಆದರೆ, ಒಂದೇ ಒಂದು ಪ್ರಕರಣ ದಾಖಲಾಗದ ರಾಯಪುರ ವಾರ್ಡ್‍ನಲ್ಲಿ ಲ್ಯಾಬ್ ತೆಗೆಯುವುದು ಬೇಡ ಎಂದು ಸ್ಥಳೀಯರು ವಿರೋಧಿಸಿದ್ದಾರೆ.

ಈ ಹಿನ್ನೆಲೆ ರಾಯಪುರ ವಾರ್ಡ್‍ನ ಬಿಬಿಎಂಪಿ ಸದಸ್ಯೆ ಶಶಿಕಲಾ ಅವರು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಅವರಿಗೆ ಮನವಿ ಮಾಡಿ, ಕೊರೋನವನ್ನು ರಾಯಪುರ ವಾರ್ಡ್‍ಗೆ ತರಬೇಡಿ ಎಂದು ತಿಳಿಸಿದ್ದಾರೆ.

ನಗರದ ಪಾದರಾಯನಪುರದಲ್ಲಿ ವ್ಯಾಪಕವಾಗಿ ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಬಿಬಿಎಂಪಿ ಪಾದರಾಯನಪುರದಲ್ಲಿರುವ ಎಲ್ಲ ನಾಗರಿಕರಿಗೆ ರ್ಯಾಂಡಮ್ ಪರೀಕ್ಷೆ ನಡೆಸಲು ಹಾಗೂ ಅದಕ್ಕಾಗಿ ಒಂದು ಲ್ಯಾಬ್ ತೆರೆಯಲು ನಿರ್ಧರಿಸಿತ್ತು. ಆದರೆ, ಮೇ 11ರಿಂದ ಪ್ರಾರಂಭವಾಗಬೇಕಾಗಿದ್ದ ರ್ಯಾಂಡಮ್ ಪರೀಕ್ಷೆಗೆ ಸ್ಥಳೀಯರ ತೀವ್ರ ವಿರೋಧ ಮಾಡುತ್ತಿರುವ ಹಿನ್ನೆಲೆ ಇದುವರೆಗೂ ರ್ಯಾಂಡಮ್ ಪರೀಕ್ಷೆ ನಡೆಸಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News