ಬೆಂಗಳೂರು: ಕೊರೋನ ಸೋಂಕಿನಿಂದ 10 ವರ್ಷದ ಬಾಲಕ ಗುಣಮುಖ

Update: 2020-05-15 11:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 15: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕ ಸದ್ಯ ಸಂಪೂರ್ಣವಾಗಿ ಗುಣಮುಖನಾಗಿ ಬಿಡುಗಡೆ ಆಗಿದ್ದಾನೆ.

ನಗರದಲ್ಲಿ ಮನೆಗೆಲಸ ಮಾಡುವ ಬಾಲಕನ ತಾಯಿಯಿಂದ ಮೊದಲು ತಂದೆ, ನಂತರ ಈ ಬಾಲಕನಿಗೂ ಸೋಂಕು ತಗುಲಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಲಕನ ಅಪ್ಪ, ಅಮ್ಮ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಆಗಿದ್ದರು.

ಆನಂತರ ಬಾಲಕ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಕೊರೋನ ವಾರ್ಡ್‍ನಲ್ಲೇ ಡ್ರಾಯಿಂಗ್, ಪೇಂಟಿಂಗ್ ಮಾಡುತ್ತಾ ಸುಮಾರು 21 ದಿನಗಳನ್ನು ಕಳೆದಿದ್ದ. ಡ್ರಾಯಿಂಗ್‍ನಲ್ಲಿ ರಾಷ್ಟ್ರಧ್ವಜ ಚಿತ್ರಿಸಿದ್ದಲ್ಲದೇ, ಟಿಕ್‍ಟಾಕ್‍ನಲ್ಲಿ ತನ್ನಿಷ್ಟದ ಹಾಡುಗಳಿಗೆ ಡ್ಯಾನ್ಸ್ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News