ಕೊರೋನ ಬಿಕ್ಕಟ್ಟು: 40 ಲಕ್ಷ ಬಾಲಕಿಯರಿಗೆ ಬಾಲ್ಯವಿವಾಹದ ಭೀತಿ

Update: 2020-05-15 16:18 GMT
ಸಾಂದರ್ಭಿಕ ಚಿತ್ರ

ಲಂಡನ್, ಮೇ 15: ನೂತನ-ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಮುಂದಿನ ಎರಡು ವರ್ಷಗಳಲ್ಲಿ 40 ಲಕ್ಷ ಬಾಲಕಿಯರು ಬಾಲ್ಯವಿವಾಹಕ್ಕೆ ಒಳಪಡುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಜಾಗತಿಕ ದತ್ತಿ ಸಂಸ್ಥೆ ವರ್ಲ್ಡ್ ವಿಶನ್ ಶುಕ್ರವಾರ ಹೇಳಿದೆ. ಬಾಲ್ಯವಿವಾಹವನ್ನು ಕೊನೆಗೊಳಿಸಲು ದಶಕಗಳಿಂದ ಮಾಡಲಾಗಿರುವ ಕೆಲಸವನ್ನು ಈ ಸಾಂಕ್ರಾಮಿಕ ತೊಡೆದುಹಾಕುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಸಿದೆ.

ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಉದ್ಯೋಗ ನಷ್ಟ ಹಾಗೂ ಅದರ ಪರಿಣಾಮವಾಗಿ ತಲೆದೋರಿರುವ ಜೀವನೋಪಾಯ ನಷ್ಟದಿಂದಾಗಿ ಜನರ ಬಡತನ ವೃದ್ಧಿಯಾಗಿದೆ. ಹಾಗಾಗಿ ಕುಟುಂಬಗಳು ತಮ್ಮ ಪುತ್ರಿಯರನ್ನು ಬೇಗನೇ ಮದುವೆ ಮಾಡಿಕೊಡುವ ಸಾಧ್ಯತೆಗಳು ಬಲವಾಗಿವೆ ಎಂದು ಎಂದು ದತ್ತಿ ಸಂಸ್ಥೆ ತಿಳಿಸಿದೆ.

ಸಂಘರ್ಷ, ವಿಪತ್ತು ಅಥವಾ ಸಾಂಕ್ರಾಮಿಕದಂಥ ಯಾವುದಾದರೂ ಬಿಕ್ಕಟ್ಟು ಎದುರಾಗುವಾಗ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತವೆ ಎಂದು ವರ್ಲ್ಡ್ ವಿಶನ್‌ನ ಬಾಲ್ಯವಿವಾಹ ಪರಿಣತೆ ಎರಿಕಾ ಹಾಲ್ ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಇದನ್ನು ತಡೆಯುವುದು ಹೇಗೆಂಬ ಬಗ್ಗೆ ನಾವು ಈಗಲೇ ಯೋಚಿಸುವುದನ್ನು ಆರಂಭಿಸದಿದ್ದರೆ, ನಂತರ ತುಂಬಾ ತಡವಾಗಿರುತ್ತದೆ. ಈ ಕೊರೋನ ಸಾಂಕ್ರಾಮಿಕವೊಂದು ಮೊದಲು ಹೋಗಲಿ ಎಂದು ನಾವು ಕಾಯುವಂತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News