ಉಕ್ರೇನ್ ಕೃಷಿ ಸಚಿವರನ್ನು ಕಸ್ಟಡಿಗೆ ಪಡೆಯಲು ಕೋರ್ಟ್ ಆದೇಶ

Update: 2024-04-26 16:08 GMT

PC : PTI

ಕೀವ್: ಸರಕಾರದ ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಕೃಷಿ ಸಚಿವ ಮಿಕೋಲ ಸೊಲ್ಸ್ಕಿಯನ್ನು ತಕ್ಷಣ ಕಸ್ಟಡಿಗೆ ಪಡೆಯುವಂತೆ ಉಕ್ರೇನ್‍ನ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ನಿವೃತ್ತ ಯೋಧರಿಗೆ ಜಮೀನು ಒದಗಿಸುವ ಸರಕಾರದ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ಇದಾಗಿದೆ. ಸುಮಾರು 7 ದಶಲಕ್ಷ ಡಾಲರ್ ಮೌಲ್ಯದ ಸರಕಾರಿ ಜಮೀನನ್ನು ನಿವೃತ್ತ ಯೋಧರ ಹೆಸರಿಗೆ ವರ್ಗಾಯಿಸಿ ಅವರಿಂದ ಕಡಿಮೆ ಬೆಲೆಗೆ ಮರುಸ್ವಾಧೀನ ಪಡಿಸಿಕೊಂಡ ಹಗರಣದಲ್ಲಿ ಕೃಷಿ ಸಚಿವ ಮಿಕೋಲ ಸೊಲ್ಸ್ಕಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಗುರುವಾರ ರಾಜೀನಾಮೆ ಪತ್ರ ನೀಡಿದ್ದಾರೆ. ಆದರೆ ಸಂಸತ್‍ನಲ್ಲಿ ರಾಜೀನಾಮೆಗೆ ಅನುಮೋದನೆ ಪಡೆಯಬೇಕಿರುವುದರಿಂದ ತಾಂತ್ರಿಕವಾಗಿ ತಮ್ಮ ಹುದ್ದೆಯಲ್ಲಿ ಇನ್ನೂ ಮುಂದುವರಿದಿದ್ದಾರೆ. 2017ರಿಂದ 2021ರ ಅವಧಿಗೆ ಸಂಬಂಧಿಸಿದ ಹಗರಣ ಇದಾಗಿದ್ದು ಆರೋಪವನ್ನು ಮಿಕೋಲ ನಿರಾಕರಿಸಿದ್ದಾರೆ. ಆರೋಪ ಸಾಬೀತಾದರೆ 12 ವರ್ಷದವರೆಗೆ ಜೈಲುಶಿಕ್ಷೆಗೆ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News