ಸುಂಕ ಹೆಚ್ಚಳ: ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ

Update: 2020-05-15 17:18 GMT

ಬೆಂಗಳೂರು, ಮೇ 15: ರಾಜ್ಯ ಸರಕಾರ ಏಕಾಏಕಿ ಮದ್ಯದ ಮೇಲೆ ಶೇ.17ರಷ್ಟು ಸುಂಕವನ್ನು ಹೆಚ್ಚಳ ಮಾಡಿದ್ದರಿಂದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.

ಲಾಕ್‍ಡೌನ್ ಆದಾಗಿನಿಂದ ಇಲ್ಲಿಯವರೆಗೆ ಐಎಂಎಲ್‍ನಲ್ಲಿ ಶೇ.45ರಷ್ಟು ಇಳಿಕೆಯಾದರೆ, ಬಿಯರ್ ಮಾರಾಟದಲ್ಲಿ ಶೇ.82.38ರಷ್ಟು ಇಳಿಕೆಯಾಗಿದೆ. ಈ ಕುರಿತಂತೆ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

2018-19ರಲ್ಲಿ ಐಎಂಎಲ್ 600.92ರಷ್ಟು ಮಾರಾಟವಾಗಿದ್ದರೆ, ಬಿಯರ್ 289.60ರಷ್ಟು ಮಾರಾಟ ಆಗಿತ್ತು. ಆದರೆ, 2020 ಮಾರ್ಚ್‍ನಲ್ಲಿ ಲಾಕ್‍ಡೌನ್ ಹೇರಿದ ಪರಿಣಾಮ ಮದ್ಯ ವಹಿವಾಟು ಒಮ್ಮೆ ಬಂದ್ ಆಗಿತ್ತು. 2019-20ರ ಮೇ ತಿಂಗಳವರೆಗಿನ ವರದಿ ಪ್ರಕಾರ ಕೇವಲ 22.47ರಷ್ಟು ಐಎಂಎಲ್ ಹಾಗೂ 5.26ರಷ್ಟು ಬಿಯರ್ ಮಾತ್ರ ಮಾರಾಟವಾಗಿದೆ. 2020-21ರಲ್ಲಿ ಕೇವಲ 57 ಕೋಟಿಯಷ್ಟೇ ಆದಾಯ ಬರುತ್ತಿದೆ. ಈ ಮೂಲಕ ಲಾಭಾಂಶದಲ್ಲಿ ಶೇ.28ರಷ್ಟು ಇಳಿಕೆಯಾಗಿದೆ ಎಂಬ ಮಾಹಿತಿ ಅಬಕಾರಿ ಇಲಾಖೆ ಸಿದ್ಧಪಡಿಸಿರುವ ವರದಿಯಲ್ಲಿ ಕಂಡು ಬಂದಿದೆ.

ಇನ್ನು 2019-20ರಲ್ಲಿ 2119.89 ಕೋಟಿ ಆದಾಯ ಬಂದಿದ್ದು, 2020-21ರಲ್ಲಿ ಕೇವಲ 510 ಕೋಟಿ ಆದಾಯ ಬಂದಿದೆ. ಈ ಮೂಲಕ ಶೇ.75ರಷ್ಟು ಮದ್ಯ ಮಾರಾಟದಲ್ಲಿ ಇಳಿಕೆಯಾಗಿದೆ. 2020-21ರಲ್ಲಿ ಮೇವರೆಗೂ 510.15 ಕೋಟಿ ಲಾಭ ಗಳಿಸಿದೆ. ಈ ಮೂಲಕ ಶೇ.97ರಷ್ಟು ಮದ್ಯ ಮಾರಾಟದಲ್ಲಿ ಇಳಿಕೆಯಾದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News