ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ: ವಿದ್ಯಾರ್ಥಿಗಳು ವಿವರಗಳನ್ನು ಮೇಲ್ ಮಾಡಲು ಸೂಚನೆ

Update: 2020-05-16 17:30 GMT

ಬೆಂಗಳೂರು, ಮೇ 16: ಹಾಸ್ಟೆಲ್‍ನಲ್ಲಿದ್ದು ವಿದ್ಯಾಭ್ಯಾಸ ಮಾಡಿ ತಮ್ಮ ಜಿಲ್ಲೆಗಳಿಗೆ ತೆರಳಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ತಾವಿರುವ ಜಿಲ್ಲೆಗಳಲ್ಲೇ ಬರೆಯಲು ಇಚ್ಛಿಸಿದ್ದಲ್ಲಿ ತಮ್ಮ ವಿವರಗಳನ್ನು ddtt.puc@gmail.com ಗೆ ಮೇಲ್ ಮಾಡಬೇಕು. ಹಾಗೂ ಯಾವುದೇ ಕಾರಣಕ್ಕೂ ವಿವರಗಳನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಬಾರದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ವಿವರಗಳು: ಕಾಲೇಜಿನ ಸಂಕೇತ ಸಂಖ್ಯೆ, ವಿದ್ಯಾರ್ಥಿಯ ಹೆಸರು, ಸ್ಟೂಡೆಂಟ್ ನಂಬರ್, ದ್ವಿತೀಯ ಪಿಯು ರಿಜಿಸ್ಟ್ರಾರ್ ನಂಬರ್, ವಿದ್ಯಾರ್ಥಿಯ ಮೊಬೈಲ್ ನಂಬರ್, ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಹೆಸರು, ಪ್ರಸ್ತುತ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರದ ಸಂಕೇತ ಹಾಗೂ ಈಗಾಗಲೇ ಬರೆದ ಪರೀಕ್ಷಾ ಕೇಂದ್ರ ಹೊರತುಪಡಿಸಿ ಪ್ರಸ್ತುತ ವಾಸವಿರುವ ಜಿಲ್ಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ವಿವರಗಳನ್ನು ನೀಡಿ ddtt.puc@gmail.com ಗೆ ಮೇಲ್ ಮಾಡಬೇಕು.

ಸೂಚನೆ: ಇದು ಪರೀಕ್ಷಾ ಗೌಪ್ಯ ವಿಷಯವಾಗಿರುವುದರಿಂದ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರದ ವಿವರಗಳನ್ನು ವಾಟ್ಸ್ ಆ್ಯಪ್‍ನಲ್ಲಿ ಶೇರ್ ಮಾಡಬಾರದೆಂದು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News