×
Ad

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ನಿಗೂಢ ಶಬ್ಧ

Update: 2020-05-20 15:28 IST

ಬೆಂಗಳೂರು : ನಗರದ ಪೂರ್ವ ಭಾಗದಲ್ಲಿ ಇಂದು ಮಧ್ಯಾಹ್ನದ ಸುಮಾರಿಗೆ ಭಾರೀ ಸದ್ದು ಕೇಳಿಸಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ ರಸ್ತೆ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಸರ್ಜಾಪುರ, ಎಲೆಕ್ಟ್ರೋನಿಕ್‌ ಸಿಟಿ ಪ್ರದೇಶದ ಎತ್ತರದಲ್ಲಿ ಈ ಶಬ್ದ ಕೇಳಿಸಿದ್ದು, ಜೆಟ್‌, ವಿಮಾನ ಹಾರಾಟದ ವೇಳೆ ಈ ರೀತಿಯ ಶಬ್ಧ ಉಂಟಾಗುವ ಸಾಧ್ಯತೆಗಳಿರುತ್ತದೆ. ಆದರೆ, ಈ ಬಗ್ಗೆ ದೃಢಪಟ್ಟಿಲ್ಲ ಎಂದು ಮೂಲಗಳು ಹೇಳಿವೆ. ಯಾವುದೇ ಅನಾಹುತ ಸಂಭವಿಸಿದ ಮಾಹಿತಿ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News