ಟ್ವೆಂಟಿ-20 ಬ್ಯಾಟಿಂಗ್ ಕೋಚ್ ಆಗಿ ಯಶಸ್ವಿಯಾಗಲು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಅಗತ್ಯವಿಲ್ಲ

Update: 2020-05-21 04:32 GMT

ಹೊಸದಿಲ್ಲಿ, ಮೇ 20: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೆನ್ನಾಗಿ ಆಡಿರುವ ಮಾತ್ರಕ್ಕೆ ಟ್ವೆಂಟಿ-20 ಬ್ಯಾಟಿಂಗ್ ಕೋಚ್ ಆಗಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ದಿಲ್ಲಿಯ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

 ಭಾರತದ ಮಾಜಿ ಆರಂಭಿಕ ಆಟಗಾರರ ಪ್ರಕಾರ ಆಟಗಾರರಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವುದು ಕೋಚ್ ಕೆಲಸವಾಗಿದೆ ಎಂದರು. ಬ್ಯಾಟಿಂಗ್ ಕೋಚ್‌ನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಪ್ರತ್ಯೇಕವಾಗಿ ನೇಮಿಸಬಹುದು ಎಂದು ಹೇಳಿದರು.

 ‘‘ಬಹುಶಃ ನೀವು ನಿರ್ದಿಷ್ಟ ಸ್ವರೂಪಕ್ಕಾಗಿ ಬೇರೆ ಟ್ವೆಂಟಿ-20 ಬ್ಯಾಟಿಂಗ್ ತರಬೇತುದಾರರನ್ನು ಹೊಂದಬಹುದು. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡದ ಅಥವಾ ಸಾಕಷ್ಟು ಕ್ರಿಕೆಟ್ ಆಡದ ಯಾರಾದರೂ ಯಶಸ್ವಿ ಕೋಚ್ ಆಗಲು ಸಾಧ್ಯವಿಲ್ಲ ಎಂಬುದು ನಿಜವಲ್ಲ ಎಂದು ಸ್ಟಾರ್ ಸ್ಪೋರ್ಟ್ಸ್ ‘ಕ್ರಿಕೆಟ್ ಕನೆಕ್ಟೆಡ್’ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

ಟ್ವೆಂಟಿ-20 ಬ್ಯಾಟಿಂಗ್ ಕೋಚ್ ಕೆಲಸವೆಂದರೆ ಹೊಡೆತಗಳನ್ನು ಹೇಗೆ ಹೊಡೆಯುವುದು ಎಂದು ಕಲಿಸುವುದು ಅಲ್ಲ ಎಂದು ಗಂಭೀರ್ ಹೇಳಿದರು.

 ಲ್ಯಾಪ್ ಶಾಟ್ ಅಥವಾ ರಿವರ್ಸ್ ಲ್ಯಾಪ್ ಶಾಟ್‌ನ್ನುಹೇಗೆ ಹೊಡೆಯುವುದು ಎಂದು ಯಾರೂ ನಿಮಗೆ ಕಲಿಸುವುದಿಲ್ಲ, ಯಾವುದೇ ಕೋಚ್ ಅದನ್ನು ಮಾಡಲು ಸಾಧ್ಯವಿಲ್ಲ. ಯಾರಾದರೂ ಅದನ್ನು ಆಟಗಾರನಿಗೆ ಕಲಿಸಲು ಪ್ರಯತ್ನಿಸುತ್ತಿದ್ದರೆ, ಕೋಚ್ ಆಟಗಾರನನ್ನು ಉತ್ತಮ ಆಟಗಾರನನ್ನಾಗಿ ಮಾಡುವುದಕ್ಕಿಂತ ಹೆಚ್ಚಾಗಿ ಅವನಿಗೆ ಹಾನಿ ಮಾಡುತ್ತಿದ್ದಾರೆ ಎಂದು ಭಾವಿಸಬೇಕು. ಆದಾಗ್ಯೂ, ಯಶಸ್ವಿ ಆಟಗಾರನಾಗಿರುವುದು ಉತ್ತಮ ಆಯ್ಕೆಗಾರನಾಗಲು ಹೇಗೆ ಸಹಾಯ ಮಾಡುತ್ತದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

   ‘‘ನೀವು ಯಶಸ್ವಿ ಕೋಚ್ ಆಗಲು ಸಾಕಷ್ಟು ಕ್ರಿಕೆಟ್ ಆಡಿದ್ದೀರಿ ಎಂಬುದು ಮುಖ್ಯವಲ್ಲ ಆದರೆ ನೀವು ಹೆಚ್ಚು ಕ್ರಿಕೆಟ್ ಆಡಿದರೆ ಆಯ್ಕೆ ಸಮಿತಿ ಸೇರಲು ಸುಲಭವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News