11 ಸಾವಿರ ವಲಸೆ ಕಾರ್ಮಿಕರನ್ನು ಕರೆದೊಯ್ದ 8 ಶ್ರಮಿಕ ರೈಲುಗಳು

Update: 2020-05-22 12:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 22: ನೈರುತ್ಯ ರೈಲ್ವೆ ವಲಯವು ಗುರುವಾರ 8 ಶ್ರಮಿಕ ರೈಲುಗಳ ಮೂಲಕ ದೇಶದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರನ್ನು ಕರೆದೊಯ್ದಿದೆ.

ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ 1, ಹುಬ್ಬಳ್ಳಿಯಿಂದ ಲಖನೌ ಮತ್ತು ಛತ್ತೀಸ್‍ಗಡಕ್ಕೆ 2, ಬೆಂಗಳೂರಿನಿಂದ ಬಿಹಾರಕ್ಕೆ 2 ಮತ್ತು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‍ಗಡಕ್ಕೆ ತಲಾ 1 ರೈಲುಗಳು 11,557 ಪ್ರಯಾಣಿಕರನ್ನು ಹೊತ್ತೊಯ್ದಿವೆ.

ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆಯ ನಂತರ ಆರಂಭವಾದ ಶ್ರಮಿಕ ರೈಲುಗಳು ಇದುವರೆಗೆ 116 ಸಂಚರಿಸಿದ್ದು 1,62,329 ಪ್ರಯಾಣಿಕರು ಸಂಚರಿಸಿದ್ದಾರೆ.

ಬೆಂಗಳೂರಿನಿಂದ ಜೈಪುರಕ್ಕೆ 1131 ಮಂದಿ, ಹುಬ್ಬಳ್ಳಿಯಿಂದ ಲಕ್ನೋಗೆ 1513 ಮಂದಿ, ದರ್ಬಾಂಗಾಗೆ 1596 ಮಂದಿ, ತಮಿಳುನಾಡಿನಿಂದ ಉತ್ತರ ಪ್ರದೇಶದ ಡಿಯೋರಿಯಾಗೆ 1600 ಮಂದಿ, ಬೆಂಗಳೂರಿನಿಂದ ಬಿಹಾರ್‍ಗೆ 1531 ಮಂದಿ, ಬಿಲಾಸುರಕ್ಕೆ 1205 ಮಂದಿ, ಗಯಾಗೆ 1531 ಮಂದಿ ಪ್ರಯಾಣಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News