ಆದಿತ್ಯನಾಥ್ ಅನುಮತಿಯ ನಂತರ ಗೋರಖನಾಥ ದೇವಸ್ಥಾನದ ಆವರಣ ಗೋಡೆ ನೆಲಸಮ

Update: 2020-05-23 07:51 GMT

ಗೋರಖಪುರ್:  ಗೋರಖಪುರ್ ಹಾಗೂ ಸೋನೌಲಿ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ಚತುಷ್ಪಥ ಕಾಮಗಾರಿಗಾಗಿ ಗೋರಖನಾಥ ದೇವಾಲಯದ ಆವರಣ ಗೋಡೆಯ ಒಂದು ಭಾಗವನ್ನು ನೆಲಸಮಗೊಳಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆವರಣ ಗೋಡೆಯ ಭಾಗವನ್ನು ಹಾಗೂ ಹತ್ತಿರದ ಸುಮಾರು 50 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.

ಈ ವಿಸ್ತರಣೆಗೊಳ್ಳಲಿರುವ ರಸ್ತೆಯು ಗೋರಖನಾಥ ದೇವಸ್ಥಾನ, ಧರಂಶಾಲ, ಮೊಹದಿಪುರ್, ಕುದಾಘಟ್ ಹಾಗೂ ನಂದನಗರ್ ಪ್ರದೇಶಗಳು ಹಾಗೂ ವಿಮಾನ ನಿಲ್ದಾಣದ ನಡುವೆ  ಸಂಪರ್ಕ ಕೊಂಡಿಯಾಗಲಿದೆ. ದೇವಸ್ಥಾನದ ಎದುರಿನ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ರಸ್ತೆ ಅಗಲೀಕರಣವು ಈ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಚತುಷ್ಪಥ ರಸ್ತೆ ಮಾರ್ಚ್ 2021ರ ವೇಳೆಗೆ ಪೂರ್ಣಗೊಳ್ಳಲಿದೆ. ನಾವೀಗಾಗಲೇ ಶೇ 30ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದೇವೆ ಎಂದು ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ  ಯೋಜನೆಯ ಮ್ಯಾನೇಜರ್ ಎಂ ಕೆ ಅಗರ್ವಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News