ವಲಸಿಗ ಕಾರ್ಮಿಕರಿಗಾಗಿ ಸರಕಾರ ಬಹಳಷ್ಟು ಕೆಲಸಗಳನ್ನು ಮಾಡಬಹುದಾಗಿತ್ತು: ನೀತಿ ಆಯೋಗದ ಸಿಇಒ

Update: 2020-05-23 09:43 GMT

ಹೊಸದಿಲ್ಲಿ: ದೇಶವ್ಯಾಪಿ ಲಾಕ್‍ಡೌನ್‍ನಿಂದಾಗಿ ಅತಂತ್ರರಾಗಿ ಬಹಳಷ್ಟು ಕಷ್ಟನಷ್ಟ ಅನುಭವಿಸಿದ ವಲಸಿಗ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹಳಷ್ಟು ಮಾಡಬಹುದಾಗಿತ್ತು ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್-19 ಇನ್ನಷ್ಟು ವ್ಯಾಪಕವಾಗಿ ಹರಡುವುದನ್ನು ಲಾಕ್‍ಡೌನ್ ಬಹುತೇಕ ತಡೆಗಟ್ಟಲು ಯಶಸ್ವಿಯಾಗಿದ್ದರೂ ವಲಸಿಗ ಕಾರ್ಮಿಕರ ಸಮಸ್ಯೆಯನ್ನು ಅತ್ಯಂತ ಅಸಮಾಧಾನಕರ ರೀತಿಯಲ್ಲಿ ನಿಭಾಯಿಸಲಾಯಿತು ಎಂದಿದ್ದಾರೆ.

“ವಲಸಿಗ ಕಾರ್ಮಿಕರ ವಿಚಾರ ಒಂದು ಸವಾಲಾಗಿತ್ತು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಏಕೆಂದರೆ  ನಾವು ಸೃಷ್ಟಿಸಿದ ಕಾನೂನುಗಳಿಂದಾಗಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಸಂಖ್ಯೆಯ ಅಸಂಘಟಿತ ವಲಯದ ಕಾರ್ಮಿಕರಿರಲು ಕಾರಣವಾಗಿದೆ'' ಎಂದು ಅವರು ಹೇಳಿದರು.

“ವಲಸಿಗ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿತ್ತು. ನಮ್ಮಂತಹ ದೊಡ್ಡ ದೇಶದಲ್ಲಿ ಕೇಂದ್ರ ಸರಕಾರದ ಪಾತ್ರ ಸೀಮಿತವಾಗಿದೆ. ನಾವು ಪ್ರತಿಯೊಬ್ಬ ಕಾರ್ಮಿಕನನ್ನು ರಾಜ್ಯ, ಸ್ಥಳೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದಾಗಿತ್ತು'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News