ಲಾಕ್‍ಡೌನ್‍ ಸಂಕಷ್ಟ: 280 ನಿವೃತ್ತ ಯೋಧರನ್ನು ಕೆಲಸದಿಂದ ವಜಾಗೊಳಿಸಿದ ಎಚ್‍ಎಎಲ್ !

Update: 2020-05-23 15:22 GMT

ಬೆಂಗಳೂರು, ಮೇ 23: ಲಾಕ್‍ಡೌನ್ ಸಂಕಷ್ಟದಿಂದಾಗಿ ಬೆಂಗಳೂರು ನಗರದಲ್ಲಿರುವ ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ(ಎಚ್‍ಎಎಲ್) ಏಕಾಏಕಿ 280 ನಿವೃತ್ತ ಯೋಧರನ್ನು ಕೆಲಸದಿಂದ ವಜಾಗೊಳಿಸಿದೆ.

ಇವರೆಲ್ಲರೂ ಕಳೆದ 8 ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್‍ಗಳಾಗಿ ಕೆಲಸ ಮಾಡುತ್ತಿದ್ದರು. ದೊಮ್ಮಲೂರಿನ ಎಸ್‍ಎಎಸ್ ಏಜೆನ್ಸಿ ಮೂಲಕ ಇವರು ಎಚ್‍ಎಎಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್‍ಗಿಂತ ಮೊದಲು 25 ಸಾವಿರ ಸಂಬಳ ನೀಡುತ್ತಿದ್ದರು. ಈಗ 18 ಸಾವಿರ ಸಂಬಳ ನೀಡುತ್ತೇವೆ ಎಂದು ಎಚ್‍ಎಎಲ್ ಸಂಸ್ಥೆ ಎಸ್‍ಎಎಸ್‍ಗೆ ತಿಳಿಸಿದೆ.

ಇದಕ್ಕೆ ಒಪ್ಪದ ನಿವೃತ್ತ ಯೋಧರನ್ನು ಕೆಲಸದಿಂದ ವಜಾ ಮಾಡಿದೆ. ಏಕಾಏಕಿ ಕೆಲಸದಿಂದ ವಜಾಗೊಳಿಸಿದ ಆರೋಪ ಎಚ್‍ಎಎಲ್ ಮೇಲಿದೆ. ಇಂದಿನಿಂದಲೇ ಕೆಲಸಕ್ಕೆ ಬಾರದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಎಸ್‍ಎಎಸ್ ಏಜೆನ್ಸಿ ಕಚೇರಿ ಮುಂದೆ ನಿವೃತ್ತ ಯೋಧರು ಧರಣಿ ನಡೆಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News