'ಕ್ವಾರಂಟೈನ್ ಬೇಡವೆಂದರೆ 25 ಸಾವಿರ ಕೊಡು' ಎಂದ ಮಧ್ಯವರ್ತಿ ಬಂಧನ

Update: 2020-05-24 06:49 GMT

ಬೆಂಗಳೂರು, ಮೇ.24: ಕ್ವಾರಂಟೈನ್‌ ನಲ್ಲಿ ಇರದೆ,  ನೇರ ಮನೆಗೆ ಹೋಗಲು 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಸಂಬಂಧ ಆರೋಪಿಯೊರ್ವನನ್ನು ಇಲ್ಲಿನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಬ್ಯಾಟರಾಯನಪುರ ನಿವಾಸಿ ಕೃಷ್ಣೇಗೌಡ (55) ಎಂಬಾತ ಬಂಧಿತ ಆರೋಪಿಯಾಗಿದ್ದು  ಹೋಟೆಲ್‌ಗಳಿಗೆ ಗ್ರಾಹಕರನ್ನು ಕರೆದೊಯ್ಯುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ವೈದ್ಯ ಬಿ.ವೈ. ನಂದಾ ಎಂಬುವರು ನೀಡಿದ್ದ ದೂರಿನಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಏನಿದು ಪ್ರಕರಣ:?

ಮೆ.16ರಂದು  ಹೊರ ರಾಜ್ಯದಿಂದ ಬಂದಿದ್ದ 70 ಪ್ರಯಾಣಿಕರನ್ನು ಗಾಂಧಿ ನಗರದ ದೀವಾ ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಮೇ18ರಂದು ಹೊಟೇಲ್‌ಗೆ ಬಂದಿದ್ದ ಕೃಷ್ಣೇಗೌಡ, ಕ್ವಾರಂಟೈನ್‌ನಲ್ಲಿದ್ದ ಕೆಲ ಮಂದಿಯನ್ನು ಪರಿಚಯಿಸಿಕೊಂಡಿದ್ದರು.

ಬಳಿಕ ಕೃಷ್ಣೇಗೌಡ, ‘ನನಗೆ 25 ಸಾವಿರ ಕೊಟ್ಟರೆ ವೈದ್ಯಕೀಯ ಪರೀಕ್ಷೆ ಬಳಿಕವೇ ಯಾವುದೇ ಕ್ವಾರಂಟೈನ್ ಇಲ್ಲದೇ ಮನೆಗೆ ಕಳಿಸುತ್ತೇನೆ ಎಂದು ಆಮಿಷವೊಡ್ಡಿದ್ದರು. ಈ ಸಂಗತಿ ದೂರಿನಲ್ಲಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News