ಬೆಂಗಳೂರಿನಲ್ಲಿ ಐದು ಕೊರೋನ ಪ್ರಕರಣಗಳು ದೃಢ

Update: 2020-05-25 18:16 GMT

ಬೆಂಗಳೂರು, ಮೇ 25: ನಗರದಲ್ಲಿ ಹೊಸದಾಗಿ ಐದು ಕೊರೋನ ಪ್ರಕರಣ ಪತ್ತೆಯಾಗಿದ್ದು, ಮಹಾರಾಷ್ಟ್ರದಿಂದ ಬಂದಿದ್ದ 53 ವರ್ಷದ ಮಹಿಳೆ ರೋಗಿ, ಬ್ರಿಟನ್‍ನಿಂದ ಬಂದಿರುವ 25 ವರ್ಷದ ಯುವಕ, ಲಂಡನ್‍ನಿಂದ ಬಂದಿರುವ 25 ವರ್ಷದ ಯುವಕ ಹಾಗೂ ಪಾದರಾಯನಪುರದ 30 ವರ್ಷದ ಮಹಿಳೆಗೆ ಹಾಗೂ ನಾಗರಬಾವಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಅಂತರ್ ರಾಜ್ಯ ಹಾಗೂ ಅಂತಾರ್ ರಾಷ್ಟ್ರೀಯ ಪ್ರಯಾಣ ಇತಿಹಾಸ ಹೊರತುಪಡಿಸಿ ನಗರದ ಪಾದರಾಯನಪುರದ ನಿವಾಸಿಯೊಬ್ಬರಿಗೂ ಸಾಮುದಾಯಿಕ ಪರೀಕ್ಷೆಯಲ್ಲಿ 30 ವರ್ಷದ ಮಹಿಳೆ(ರೋಗಿ ಸಂಖ್ಯೆ-2090)ಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಸಾಮುದಾಯಿಕ ಪರೀಕ್ಷೆ ನಡೆಸಿದ 500 ಜನರ ವರದಿಯು ಮುಂದಿನ ದಿನಗಳಲ್ಲಿ ಬರಲಿದೆ.

ನಗರದಲ್ಲಿ 22 ಕಂಟೈನ್ಮೆಂಟ್ ಝೋನ್: ಕೊರೋನ ಪ್ರಕರಣ ಪತ್ತೆಯಾದ ಎಸ್.ಕೆ ಗಾರ್ಡನ್ ಹಾಗೂ ಪುಟ್ಟೇನಹಳ್ಳಿಯನ್ನು ಕಂಟೈನ್ಮೆಂಟ್ ಮಾಡಲಾಗಿದೆ. ಬಿಲೇಕಹಳ್ಳಿ-01, ಹೊಂಗಸಂದ್ರ-35, ಮಂಗಮ್ಮನಪಾಳ್ಯ-09. ಬೇಗೂರು-01, ಪುಟ್ಟೇನಹಳ್ಳಿ-04, ಹೂಡಿ-03, ನಾಗಾವರ- 01, ಹೆಚ್‍ಬಿಆರ್ ಲೇಔಟ್-01, ಶಿವಾಜಿನಗರ-46, ಎಸ್.ಕೆ ಗಾರ್ಡನ್-01, ದೀಪಾಂಜಲಿ ನಗರ-01, ಬಿಟಿಎಂ ಲೇಔಟ್-01, ಲಕ್ಕಸಂದ್ರ-01, ಮಲ್ಲೇಶ್ವರ-03, ಪಾದರಾಯನಪುರ- 64, ಜಗಜೀವನ್‍ರಾಂ ನಗರ-01, ಕೆ.ಆರ್ ಮಾರ್ಕೆಟ್-01, ಮಾರಪ್ಪನಪಾಳ್ಯ-01, ಥನಿಸಂದ್ರ-01, ಹಾರೋಹಳ್ಳಿ-01, ಜ್ಞಾನಭಾರತಿ ನಗರ-01.

ನಗರದಲ್ಲಿ 280 ಕೊರೋನ ಪತ್ತೆ: ನಗರದಲ್ಲಿ ಇಲ್ಲಿಯವರಿಗೆ 280 ಪ್ರಕರಣ ಪತ್ತೆಯಾಗಿದ್ದು, 149 ಜನರು ಗುಣಮುಖರಾಗಿದ್ದು, 114 ಜನರಿಗೆ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 9,469 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,423 ಜನರು ಹಾಗೂ ದ್ವೀತಿಯ ಸಂಪರ್ಕದಲ್ಲಿರುವ 5,200 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ನೆಲಮಂಗಲ ಮಹಿಳೆ ಸಾವು: ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವೀರಸಾಗರ ಗ್ರಾಮದ ನಿವಾಸಿ 55 ವರ್ಷದ ಮಹಿಳೆ(ಪಿ-1686) ರವಿವಾರ ರಾತ್ರಿ 8 ಗಂಟೆಗೆ ಮೃತಪಟ್ಟಿದ್ದಾರೆ. ಕೋವಿಡ್-19ರ ಅಂತ್ಯಸಂಸ್ಕಾರದ ಮಾರ್ಗಸೂಚಿಯಂತೆ ತುಮಕೂರಿನಲ್ಲಿ ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News