ಬೆಂಗಳೂರಿನಲ್ಲಿ 2 ಹೊಸ ಕೊರೋನ ಪ್ರಕರಣ ದೃಢ

Update: 2020-05-26 17:06 GMT

ಬೆಂಗಳೂರು, ಮೇ 26: ನಗರದಲ್ಲಿ ಹೊಸದಾಗಿ ಮಂಗಳವಾರ ಎರಡು ಪ್ರಕರಣ ಪತ್ತೆಯಾಗಿದ್ದು, ತಮಿಳುನಾಡಿನಿಂದ ಬೆಂಗಳೂರಿಗೆ ಹಿಂದಿರುಗಿದ 65 ವರ್ಷದ ಮಹಿಳೆ ಹಾಗೂ ವೈಟ್‍ಫೀಲ್ಡ್ ನ 33 ವರ್ಷದ ವ್ಯಕ್ತಿಯಲ್ಲಿ ಕೊರೋನ ಪತ್ತೆಯಾಗಿದೆ. 

ನಗರದ ವೈಟ್ ಫೀಲ್ಡ್ ಬಳಿಯ ವರ್ತೂರಿನಲ್ಲಿ ಪಿ-2258ನ 33 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈತ ವರ್ತೂರಿನ ಸಿದ್ಧಾಪುರದ ನಿವಾಸಿಯಾಗಿದ್ದು, ಕೊಲ್ಕತ್ತಾದಿಂದ ಬಂದಿದ್ದರು. ಮೂಳೆ ಸಂಬಂಧ ಚಿಕಿತ್ಸೆಗಾಗಿ ನಗರದ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರು ವರ್ತೂರಿನಲ್ಲಿರುವ ಅಣ್ಣನ ಮನೆಯಲ್ಲಿ ವಾಸವಾಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಸರ್ಜರಿ ಮಾಡುವ ಮುನ್ನ ಕೊರೋನ ಪರೀಕ್ಷೆ ನಡೆಸಿದ್ದಾಗ ಸೋಂಕು ಪತ್ತೆಯಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ 4 ಜನರನ್ನು ಕಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕಿತರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಹಿಂದಿರುಗಿದ 65 ವರ್ಷದ ಮಹಿಳೆಗೆ ಕೊರೋನ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

25 ಕಂಟೈನ್ಮೆಂಟ್ ಝೋನ್: ಕೊರೋನ ಪ್ರಕರಣ ಪತ್ತೆಯಾದ ವತ್ತೂರು ಹಾಗೂ ಹಗದೂರು ಏರಿಯಾವನ್ನು ಕಂಟೈನ್ಮೆಂಟ್ ಮಾಡಲಾಗಿದೆ. ಬಿಲೇಕಹಳ್ಳಿ-01, ಹೊಂಗಸಂದ್ರ- 35, ಮಂಗಮ್ಮನಪಾಳ್ಯ-09, ಬೇಗೂರು-01, ಪುಟ್ಟೇನಹಳ್ಳಿ-04, ಹೂಡಿ-03, ನಾಗಾವರ- 01, ಹೆಚ್‍ಬಿಆರ್ ಲೇಔಟ್-01, ಶಿವಾಜಿನಗರ-46, ಎಸ್.ಕೆ ಗಾರ್ಡನ್-01, ದೀಪಾಂಜಲಿನಗರ- 01, ಬಿಟಿಎಂ ಲೇಔಟ್-01, ಲಕ್ಕಸಂದ್ರ-01, ಮಲ್ಲೇಶ್ವರ-03, ಪಾದರಾಯನಪುರ-64, ಜಗಜೀವನ್‍ರಾಂ ನಗರ-01, ಕೆ.ಆರ್ ಮಾರ್ಕೆಟ್-01, ಮಾರಪ್ಪನಪಾಳ್ಯ-01, ಬೇಗೂರು-01, ತನಿಸಂದ್ರ-01, ಹಾರೋಹಳ್ಳಿ-01, ಜ್ಞಾನಭಾರತಿ ನಗರ-01, ವತ್ತೂರು-01, ಹಗದೂರು-01. 

282 ಕೊರೋನ ಪ್ರಕರಣ: ನಗರದಲ್ಲಿ ಇಲ್ಲಿಯವರಿಗೆ 282 ಪ್ರಕರಣ ಪತ್ತೆಯಾಗಿದ್ದು, 149 ಜನರು ಗುಣಮುಖರಾಗಿದ್ದಾರೆ. 114 ಜನರಿಗೆ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರಚಿಕಿತ್ಸಾಲಯಲ್ಲಿ ಒಟ್ಟು 10,409 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,576 ಜನರು ಹಾಗೂ  ದ್ವೀತಿಯ ಸಂಪರ್ಕದಲ್ಲಿರುವ 5,401 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News