ಕೆಒಎಸ್ ಪರೀಕ್ಷೆ ದಿನಾಂಕ ನಿಗದಿ

Update: 2020-05-27 18:58 GMT

ಬೆಂಗಳೂರು, ಮೇ 27: ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಪರೀಕ್ಷೆಗಳು ಮುಂದೂಡಿರುವಂತೆ ಕರ್ನಾಟಕ ಮುಕ್ತ ಶಾಲೆ -ಕೆ.ಒ.ಎಸ್ ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದವು. ಈಗ ಎಸೆಸೆಲ್ಸಿ, ದ್ವಿತೀಯ ಪಿಯುಸಿ, ಟಿಇಟಿ ಪರೀಕ್ಷೆಗಳು ಘೋಷಣೆಯಾದ ನಂತರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯೂ ಕೆಒಎಸ್ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ.

ಕೆಒಎಸ್ ಪರೀಕ್ಷೆಯು ಜುಲೈ 6 ರಿಂದ 15 ರವರೆಗೆ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ವಿದ್ಯಾರ್ಥಿಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಂಡು ಕೊರೋನ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News