ಸರಕಾರದ ವೈಫಲ್ಯ ಮುಚ್ಚಿಹಾಕಲು ಮೇಲ್ಸೇತುವೆಗೆ ಸಾವರ್ಕರ್ ಹೆಸರು: ವೆಲ್ಫೇರ್ ಪಾರ್ಟಿ

Update: 2020-05-28 13:45 GMT

ಬೆಂಗಳೂರು, ಮೇ 28: ಸರಕಾರದ ವೈಫಲ್ಯ ಮುಚ್ಚಿಹಾಕಲು ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೀರ್ ಹುಸೇನ್ ಹೇಳಿದ್ದಾರೆ.

ಸಾವರ್ಕರ್ ಹೋರಾಟಗಾರರಲ್ಲ ಎಂದು ತಾವು ಹೇಳುತ್ತಿಲ್ಲ. ಆದರೆ ಅವರು ಸ್ವಾತಂತ್ರ್ಯ ಹೋರಾಟ ನಿಲ್ಲಿಸಿ ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದಿಂದ ವಿಮುಖರಾಗಿದ್ದರು ಎಂದು ಅವರು ಆರೋಪಿಸಿದ್ದಾರೆ.

ಕೊರೋನದಂತಹ ಸಂಕಷ್ಟದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವರ್ಕರ್ ವಿಷಯ ತೆಗೆದುಕೊಂಡು ಜನಸಾಮಾನ್ಯರನ್ನು ದಾರಿತಪ್ಪಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅವರ ಹೆಸರನ್ನು ಬೇಕಾದರೆ ಸೇತುವೆಗೆ ಇಡಲಿ. ಅದನ್ನು ಬಿಟ್ಟು ಸಾರ್ವಕರ್ ಹೆಸರು ಇಡುವುದು ಬೇಡ ಎಂದು ರಾಜ್ಯ ಸರಕಾರವನ್ನು ತಾಹೀರ್ ಹುಸೇನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News