ಗೃಹ ಸಚಿವಾಲಯದ ಫೇಸ್‍ಬುಕ್ ಪೇಜ್‍ನಲ್ಲಿ ‘ವಿಸ್ಕಿ ಬಾಟಲಿ’ಗಳ ಫೋಟೊ!

Update: 2020-05-28 17:33 GMT

ಹೊಸದಿಲ್ಲಿ: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಫೇಸ್‍ಬುಕ್ ಪೇಜ್‍ ನಲ್ಲಿ ಎರಡು ವಿಸ್ಕಿ ಬಾಟಲಿ ಹಾಗೂ ಖಾದ್ಯಗಳ ಫೋಟೊ ಪೋಸ್ಟ್ ಮಾಡಿದ ಘಟನೆ ನಡೆದಿದೆ.

ಚಂಡಮಾರುತ ಪೀಡಿತ ಬಂಗಾಳದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಕುರಿತ ಪೋಸ್ಟ್‍ನಲ್ಲಿ ವಿಸ್ಕಿಯ ಫೋಟೊ ಇತ್ತು.

“ಪ್ರತಿಯೊಬ್ಬರಿಗೂ ಆರಾಮದ ಅಗತ್ಯ ಇದೆ ಎನ್ನುವುದಕ್ಕೆ ಇದು ಪುರಾವೆ” ಎಂದು ಫೇಸ್‍ಬುಕ್ ಬಳಕೆದಾರರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿದರು. ಆದರೆ ಇತರ ಹಲವು ಮಂದಿ ಈ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಇದೇನಿದು? ಯಾರು ಇದಕ್ಕೆ ಹೊಣೆ? ಕಟ್ಟುನಿಟ್ಟಿನ ಕೈಗೊಳ್ಳಬೇಕು” ಎಂದು ಮತ್ತೊಬ್ಬರು ಸಲಹೆ ಮಾಡಿದರು.

ಈ ಪೇಜ್ ನಿರ್ವಹಿಸುತ್ತಿರುವ ಕಿರಿಯ ಉದ್ಯೋಗಿಯೊಬ್ಬರ ಪ್ರಮಾದಿಂದಾಗಿ ಇದು ಸಂಭವಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ಹೇಳಿವೆ. ವೈಯಕ್ತಿಕ ಪೇಜ್ ಮತ್ತು ಎಂಎಚ್‍ಎ ಪೇಜ್ ನಡುವಿನ ಗೊಂದಲದಿಂದ ಹೀಗಾಗಿರಬಹುದು ಎಂದು ಹೇಳಿದೆ.

ಬೆಳಿಗ್ಗೆ 9:32ಕ್ಕೆ ಚಿತ್ರವನ್ನು ಕಿತ್ತುಹಾಕಲಾಯಿತು. ಈ ಪ್ರಮಾದಕ್ಕೆ ಕಾರಣವಾದ ಉದ್ಯೋಗಿ ಈ ಪ್ರಮಾದಕ್ಕೆ ಲಿಖಿತ ಕ್ಷಮಾಪಣೆ ಕೇಳಿದರು. 15 ನಿಮಿಷವರೆಗೆ ಇದು ಆನ್‍ಲೈನ್‍ನಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News