ಕೆಎಸ್ಆರ್‌ಟಿಸಿ: ಬಸ್ ನಿಲ್ದಾಣ, ಕಚೇರಿ ಆವರಣದಲ್ಲಿ ಉಗುಳಿದರೆ ದಂಡ

Update: 2020-05-30 17:44 GMT

ಬೆಂಗಳೂರು, ಮೇ 30: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬಸ್‍ ನಿಲ್ದಾಣ, ಕಚೇರಿ, ಘಟಕ, ವಿಭಾಗೀಯ ಕಾರ್ಯಾಗಾರ, ತರಬೇತಿ ಕೇಂದ್ರ ಹಾಗೂ ಉಪಾಹಾರ ಗೃಹಗಳ ಆವರಣಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದ್ದು, ನಿಯಮವನ್ನು ಉಲ್ಲಂಘಿಸಿದರೆ 100ರೂ. ದಂಡ ವಿಧಿಸಿ ಕೆಎಸ್ಆರ್‌ಟಿಸಿ ಆದೇಶಿಸಲಾಗಿದೆ.

ಕೊರೋನ ಸಾಂಕ್ರಾಮಿಕ ರೋಗವಾಗಿರುವುದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಈ ರೋಗ ಹೆಚ್ಚು ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಮತ್ತು ನೌಕರರ ಆರೋಗ್ಯದ ಹಿತದೃಷ್ಟಿ ಹಾಗೂ ಸ್ವಚ್ಛತೆ ಬಗ್ಗೆ ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಈಗ ಉಗುಳುವುದನ್ನು ನಿಷೇಧಿಸಿ ಆದೇಶಿಸಲಾಗಿದೆ.

ಉಗುಳಿದರೆ ದಂಡದ ವಿಧಿಸಲಾಗುವುದು ಎಂಬುದರ ಕುರಿತು ಬಸ್ ನಿಲ್ದಾಣ ಸೇರಿದಂತೆ ಸಾರಿಗೆ ಕಚೇರಿಯ ಆವರಣದಲ್ಲಿ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಪ್ರದರ್ಶಿಸುವ ಮುಖಾಂತರ ಸಾರ್ವಜನಿಕರಿಗೆ ಹಾಗೂ ನೌಕರರ ಗಮನಕ್ಕೆ ತರಬೇಕು. ಹಾಗೂ ಸದರಿ ಆದೇಶವನ್ನು ಉಲ್ಲಂಘಿಸಿದ ಸಾರಿಗೆ ಸಿಬ್ಬಂದಿಗಳಿಗೆ 200ರೂ. ದಂಡ ವಿಧಿಸಲು ಕಾನೂನು ರೂಪಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News