ಕೇಂದ್ರ ಸರಕಾರದಿಂದ 5,000 ಕೋ.ರೂ. ಸಹಾಯ ಕೇಳಿದ ಕೇಜ್ರಿವಾಲ್

Update: 2020-05-31 09:29 GMT

ಹೊಸದಿಲ್ಲಿ, ಮೇ 31: ತನ್ನ ಉದ್ಯೋಗಿಗಳಿಗೆ ವೇತನ ಪಾವತಿಸಲು 5,000 ಕೋ.ರೂ. ಆರ್ಥಿಕ ನೆರವು ನೀಡುವಂತೆ ದಿಲ್ಲಿ ಸರಕಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಕುರಿತು ಇಂದು ಟ್ವೀಟ್ ಮಾಡಿದ್ದಾರೆ.

 "ಇಂತಹ ಸಂಕಷ್ಟದ ಸಮಯದಲ್ಲಿ ದಿಲ್ಲಿಯ ಜನತೆಗೆ ಕೇಂದ್ರ ಸರಕಾರ ನೆರವು ನೀಡಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ'' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಹಣಕಾಸು ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, "ಇತರ ರಾಜ್ಯಗಳಿಗೆ ನೀಡಲಾಗಿರುವ ವಿಪತ್ತು ನಿಧಿಯನ್ನು ದಿಲ್ಲಿ ಸರಕಾರ ಪಡೆದಿಲ್ಲ. ಹೀಗಾಗಿ ನಮಗೆ 5,000 ಕೋ.ರೂ.ನೆರವಿನ ಅಗತ್ಯವಿದೆ. ದಿಲ್ಲಿ ಸರಕಾರಕ್ಕೆ ತಿಂಗಳ ವೇತನ ಹಾಗೂ ಇತರ ಅವಶ್ಯಕತೆಯನ್ನು ಪೂರೈಸಲು 3,500 ಕೋ.ರೂ. ಅಗತ್ಯವಿದೆ. ಕಳೆದ 2 ತಿಂಗಳುಗಳಲ್ಲಿ ನಮ್ಮ ಜಿಎಸ್‌ಟಿ ಸಂಗ್ರಹ ಕೇವಲ 500 ಕೋ.ರೂ. ನಮ್ಮ ಉದ್ಯೋಗಿಗಳಿಗೆ ವೇತನ ನೀಡಲು ನಮಗೆ ಕನಿಷ್ಠ 7,000 ಕೋ.ರೂ. ಅಗತ್ಯವಿದೆ'' ಎಂದು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News