ಬಾಲ ಕಾರ್ಮಿಕರನ್ನು ಹುಟ್ಟೂರಿಗೆ ಕಳುಹಿಸಲು ಸೂಚನೆ

Update: 2020-05-31 18:11 GMT

ಬೆಂಗಳೂರು, ಮೇ 31: ಬಾಲ ಕಾರ್ಮಿಕ ಸುಳಿಯಿಂದ ಪಾರಾದ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆಯ ಮಕ್ಕಳನ್ನು ಕೊರೋನ ಹಿನ್ನೆಲೆ ಬಾಲಮಂದಿರದಲ್ಲಿ ಇರಿಸಲಾಗಿದ್ದು, ಅವರನ್ನು ಹುಟ್ಟೂರಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಅಧಿಕಾರಿಗೆ ಪತ್ರ ಬರೆದಿದೆ.

ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದು, ಕೇಂದ್ರ ಸರಕಾರವು ರೈಲ್ವೆ ಸಂಚಾರಕ್ಕೆ ಅನುಮತಿ ನೀಡಿದೆ. ಆದುದರಿಂದ ಮಕ್ಕಳನ್ನು ಕಳುಹಿಸಲು ಇದು ಸಕಾಲವಾಗಿದೆ. ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.

ಬಿಹಾರ್, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಒಡಿಶಾ, ಬಾಂಗ್ಲಾದೇಶ ದೇಶ ಸೇರಿದಂತೆ ಉತ್ತರ ಭಾರತಕ್ಕೆ ತೆರಳಬೇಕಾದ ಮಕ್ಕಳು ಬೆಂಗಳೂರಿನ ಬಾಲಮಂದಿರದಲ್ಲಿದ್ದಾರೆ. ಈ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಆಯಾ ರಾಜ್ಯಗಳ ಮಕ್ಕಳ ಕಲ್ಯಾಣ ಸಮಿತಿ ಜತೆ ಚರ್ಚಿಸಲಾಗಿದೆ.

ಇಲಾಖೆ ಅಧಿಕಾರಿಗಳು, ಚೈಲ್ಡ್ ಲೈನ್ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ, ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಲಾಗಿದೆ ಎಂದು ಸಮಿತಿಯ ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷೆ ಅಂಜಲಿ ರಾಮಣ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News