ಮುಂದಿನ ವಾರದಿಂದ ಕೋವಿಡ್-19 ರೋಗಿಗಳಿಗೆ ಔಷಧಿ ನೀಡಲು ರಶ್ಯ ನಿರ್ಧಾರ

Update: 2020-06-01 18:38 GMT

ಮಾಸ್ಕೋ (ರಶ್ಯ), ಜೂ. 1: ದೇಶದ ಪ್ರಥಮ ಅಂಗೀಕೃತ ಕೋವಿಡ್-19 ಔಷಧಿಯನ್ನು ಮುಂದಿನ ವಾರದಿಂದ ರೋಗಿಗಳಿಗೆ ಕೊಡಲು ಆರಂಭಿಸುವುದಾಗಿ ರಶ್ಯ ಸೋಮವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದೆ. ಇದು ರಶ್ಯದ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡಲಿದೆ ಎಂದು ಅದು ಭಾವಿಸಿದೆ.

‘ಅವಿಫವಿರ್’ ಎಂಬ ಹೆಸರಿನ ವೈರಸ್ ನಿರೋಧಕ ಔಷಧವನ್ನು ರಶ್ಯದ ಆಸ್ಪತ್ರೆಗಳು ಜೂನ್ 11ರಿಂದ ರೋಗಿಗಳಿಗೆ ಕೊಡುತ್ತವೆ ಎಂದು ರಶ್ಯದ ಆರ್‌ಡಿಐಎಫ್ ಸ್ವಾಯತ್ತ ಸಂಪತ್ತು ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರೀವ್ ಸಂದರ್ಶನವೊಂದರಲ್ಲಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು. ತಿಂಗಳಿಗೆ 60,000 ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಕಾಗುವಷ್ಟು ಔಷಧವನ್ನು ಅದನ್ನು ಉತ್ಪಾದಿಸುವ ಕಂಪೆನಿಯು ಉತ್ಪಾದಿಸುವುದು ಎಂದು ಅವರು ಹೇಳಿದರು.

ಸದ್ಯಕ್ಕೆ ಕೋವಿಡ್-19 ಕಾಯಿಲೆಗೆ ಲಸಿಕೆಯಿಲ್ಲ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಹಲವಾರು ವೈರಸ್ ನಿರೋಧಕ ಔಷಧಗಳು ಮನುಷ್ಯರ ಮೇಲೆ ಬೀರುವ ಪರಿಣಾಮಗ ಬಗ್ಗೆ ಖಚಿತತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News