ಅಭ್ಯಾಸ ಆರಂಭಿಸಿದ ಆಸ್ಟ್ರೇಲಿಯ ಕ್ರಿಕೆಟಿಗರು

Update: 2020-06-02 05:22 GMT

ಸಿಡ್ನಿ, ಆಸ್ಟ್ರೇಲಿಯದ ಅಗ್ರಮಾನ್ಯ ಕ್ರಿಕೆಟಿಗರು ಸೋಮವಾರ ಸಿಡ್ನಿ ಒಲಿಂಪಿಕ್ಸ್ ಪಾರ್ಕ್ ನಲ್ಲಿ ಅಭ್ಯಾಸ ಪುನರಾರಂಭಿಸಿದರು. ಎರಡು ತಿಂಗಳ ಕಾಲ ಬ್ಯಾಟನ್ನು ಬದಿಗಿಟ್ಟು ದೈಹಿಕ ಹಾಗೂ ಮಾನಸಿಕ ಕ್ಷಮತೆಯತ್ತ ಗಮನ ಹರಿಸಿದ ಕಾರಣ ಉತ್ತಮ ಆಕಾರ ಪಡೆದಿದ್ದೇನೆ ಎಂದು ಆಸ್ಟ್ರೇಲಿಯದ ಬ್ಯಾಟಿಂಗ್ ಮಾಂತ್ರಿಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಸ್ಟಾರ್ಕ್ ಕೂಡ ತರಬೇತಿಯಲ್ಲಿ ಪಾಲ್ಗೊಂಡರು.

ಆಸ್ಟ್ರೇಲಿಯ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕಡಿಮೆ ಬಾಧಿತವಾಗಿರುವ ದೇಶಗಳ ಪೈಕಿ ಒಂದಾಗಿದ್ದು, ಈ ತನಕ 7,000 ಪ್ರಕರಣಗಳು ವರದಿಯಾಗಿವೆ.

‘‘ನಾನು ಬಹುಶಃ ಕೆಲವು ವರ್ಷಗಳ ಬಳಿಕ ಉತ್ತಮ ಆಕಾರದಲ್ಲಿದ್ದೇನೆ. ಸಾಕಷ್ಟು ಓಟದಲ್ಲಿ ತೊಡಗಿಸಿಕೊಂಡಿದ್ದು, ಮನೆಯಲ್ಲಿ ಜಿಮ್ ಮಾಡಿದ್ದೇನೆ. ಇದು ಒಂದೆರಡು ತಿಂಗಳುಗಳ ಕಠಿಣ ಶ್ರಮವಾಗಿದೆ’’ಎಂದು ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ಗೆ ಸ್ಮಿತ್ ತಿಳಿಸಿದರು.

ಕ್ರಿಕೆಟ್ ಆಸ್ಟ್ರೇಲಿಯ ಕಳೆದ ವಾರ ಅಂತರ್‌ರಾಷ್ಟ್ರೀಯ ಋತುವನ್ನು ಘೋಷಿಸಿದ್ದು, ಕ್ರಿಕೆಟ್ ಋತು ಆಗಸ್ಟ್ 9ರಿಂದ ಆರಂಭವಾಗಲಿದೆ.

 ‘‘2019ರ ಬಿಡುವಿಲ್ಲದ ವೇಳಾಪಟ್ಟಿಯ ಬಳಿಕ ಇದೊಂದು ಸ್ವಾಗತಾರ್ಹ ವಿಶ್ರಾಂತಿಯಾಗಿತ್ತು. ನಿಜವಾಗಿಯೂ ನಾನು ಕಳೆದ ಎರಡು ತಿಂಗಳಲ್ಲಿ ಬ್ಯಾಟನ್ನು ಮುಟ್ಟಲಿಲ್ಲ. ಬಲವಂತದ ವಿರಾಮದ (ಲಾಕ್‌ಡೌನ್)ಸಮಯದಲ್ಲಿ ನಾನು ದೈಹಿಕ ಹಾಗೂಮಾನಸಿಕ ಕ್ಷಮತೆಯತ್ತ ಹೆಚ್ಚು ಗಮನ ಹರಿಸಿದ್ದೇನೆ’’ಎಂದು ಸ್ಟಾರ್ ಬ್ಯಾಟ್ಸ್‌ಮನ್ ಸ್ಮಿತ್ ಹೇಳಿದ್ದಾರೆ.

ಇಂಗ್ಲೆಂಡ್ ಕ್ರಿಕೆಟಿಗರು ಜೈವಿಕ ಸುರಕ್ಷಿತ ವಾತಾವರಣದಲ್ಲಿ ತರಬೇತಿಯನ್ನು ಆರಂಭಿಸಿದ್ದಾರೆ. ಶ್ರೀಲಂಕಾ ಆಟಗಾರರು ಕೂಡ ಸೋಮವಾರ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News