ಹೊರ ರಾಜ್ಯಗಳಿಂದ ಬಂದವರು ತಪಾಸಣೆಗೆ ಒಳಪಡದೆ ತಲೆಮರೆಸಿಕೊಂಡರೆ ಕ್ರಿಮಿನಲ್ ಪ್ರಕರಣ: ಭಾಸ್ಕರ್ ರಾವ್

Update: 2020-06-02 17:33 GMT

ಬೆಂಗಳೂರು, ಜೂ.2: ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡದೆ, ತಲೆಮರೆಸಿಕೊಂಡರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈಯಿಂದ ರೈಲಿನಲ್ಲಿ ಮೆಜೆಸ್ಟಿಕ್‍ಗೆ ಬಂದವರಲ್ಲಿ ಕೆಲ ಪ್ರಯಾಣಿಕರು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್‍ಗೆ ಒಳಗಾಗದೇ ಪರಾರಿ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಮಹಾರಾಷ್ಟ್ರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾರಣ, ಅಲ್ಲಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು ಕೊರೋನ ಪರೀಕ್ಷೆಗೆ ಒಳಗಾಗಬೇಕು. ಆದರೆ ತಪ್ಪಿಸಿಕೊಳ್ಳಲು ಮುಂದಾದರೆ, ಪೊಲೀಸರೇ ಸ್ವಯಂಪ್ರೇರಿತವಾಗಿ ಎನ್‍ಡಿಎಂಎ(ರಾಷ್ಟ್ರೀಯ ವಿಪತ್ತು ನಿರ್ವಹಣಾ) ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News