700 ಮಂದಿಗೆ ಕಿಟ್ ಹಂಚಿದ ಕಾನ್‍ಸ್ಟೇಬಲ್‍ಗೆ ಸನ್ಮಾನ

Update: 2020-06-02 17:58 GMT

ಬೆಂಗಳೂರು, ಜೂ.2: ಜಪಾನ್, ದುಬೈ ಇನ್ನಿತರ ದೇಶಗಳಿಂದ ನಗರಕ್ಕೆ ಆಗಮಿಸಿ ಕ್ವಾರಂಟೈನ್‍ನಲ್ಲಿದ್ದವರು ಕೂಲಿ ಕಾರ್ಮಿಕರು ವಲಸಿಗರು ಬಡವರು ಸೇರಿ ಸುಮಾರು 700 ಮಂದಿಗೆ ದಿನಸಿ ಕಿಟ್‍ಗಳನ್ನು ನೀಡುವಲ್ಲಿ ಶ್ರಮಿಸಿದ ಅಮೃತಹಳ್ಳಿ ಪೊಲೀಸ್ ಠಾಣೆ ಕಾನ್‍ಸ್ಟೇಬಲ್ ಚಂದ್ರಪ್ಪ ಚಿಕ್ಕ ಬಿದರಿ ಅವರನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸನ್ಮಾನಿಸಿದರು.

ಅಮೃತಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಆಯುಕ್ತ ಭಾಸ್ಕರ ರಾವ್ ಅವರು ಕಾನ್‍ಸ್ಟೇಬಲ್ ಚಂದ್ರಪ್ಪ ಚಿಕ್ಕ ಬಿದರಿ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದ್ದು ಈ ವೇಳೆ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಜಪಾನ್, ದುಬೈ ಇನ್ನಿತರ ದೇಶಗಳಿಂದ ನಗರಕ್ಕೆ ಆಗಮಿಸಿದ ಸುಮಾರು 45 ಮಂದಿ ಕ್ವಾರಂಟೈನ್‍ನಲ್ಲಿದ್ದವರ ಭದ್ರತೆಗೆ ಕಾನ್‍ಸ್ಟೇಬಲ್ ಚಂದ್ರಪ್ಪ ಚಿಕ್ಕ ಬಿದರಿ ಅವರನ್ನು ನಿಯೋಜಿಸಲಾಗಿತ್ತು. ಕ್ವಾರಂಟೈನ್‍ನಲ್ಲಿದ್ದವರ ಜೊತೆ ಮಾತುಕತೆ ನಡೆಸಿದ ಚಂದ್ರಪ್ಪ ಚಿಕ್ಕ ಬಿದರಿ ಬಡವರ ನೆರವಿಗೆ  ಮುಂದಾಗಿದ್ದಾರೆ. ಅಲ್ಲಿದ್ದ ಸುಮಾರು 45 ಮಂದಿ ಕ್ವಾರಂಟೈನ್ ಮುಗಿಸಿದ್ದು ಹಣ ಸಂಗ್ರಹಿಸಿ 700 ಮಂದಿ ಬಡವರಿಗೆ ಆಹಾರದ ಕಿಟ್‍ಗಳನ್ನು ನೀಡಿ ಮಾದರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News