ಅಭ್ಯಾಸಕ್ಕೆ ಮರಳಿದ ಭಾರತದ ಹಾಕಿ ಆಟಗಾರರು

Update: 2020-06-02 18:33 GMT

ಹೊಸದಿಲ್ಲಿ, ಜೂ.2: ಸುಮಾರು 70 ದಿನಗಳ ನಂತರ ಭಾರತದ ಹಾಕಿ ತಂಡಗಳು ಸೋಮವಾರ ಬೆಳಗ್ಗೆ ಟರ್ಫ್‌ಗೆ ಮರಳಿದವು. ಮಾರ್ಚ್ 25 ರಂದು ಲಾಕ್‌ಡೌನ್ ಹೇರಿದ ನಂತರ ಚಟುವಟಿಕೆಗಳನ್ನು ಪುನರಾರಂಭಿಸಿದ ಮೊದಲ ತಂಡದ ಕ್ರೀಡೆಯಾಗಿದೆ ಹಾಕಿ. ಇದು ಹಿಂದೆಂದೂ ಕಾಣದಂತಹ ತರಬೇತಿಯಾಗಿದ್ದು, ಅವರು ಬಳಸಿದ್ದಕ್ಕಿಂತ ಭಿನ್ನವಾಗಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಬೆಂಗಳೂರು ಕ್ಯಾಂಪಸ್‌ನೊಳಗೆ ಹೆಚ್ಚಿನ ಲಾಕ್‌ಡೌನ್ ನಿರ್ಬಂಧಿತ ಸಮಯವನ್ನು ಕಳೆದರೂ ಸಹ ಆಟಗಾರರಿಗೆ ತರಬೇತಿ ಪಡೆಯಲು ಅವಕಾಶವಿಲ್ಲ ಎಂಬ ಹತಾಶೆ ಒಂದು ತಿಂಗಳಿಗೂ ಹೆಚ್ಚು ಕಾಲ ಇತ್ತು. ಮೇ ಮಧ್ಯದಲ್ಲಿ ಸರಕಾರ ಹಾಕಿ ಆಟಗಾರರಿಗೆ ಅಭ್ಯಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರೂ, ಅದೇ ವೇಳೆ ಸಾಯ್ ಸಿಬ್ಬಂದಿ ನಿಧನ ಹೊಂದಿದ ನಂತರ ಮತ್ತು ಕೊರೋನ ವೈರಸ್ ಸೋಂಕು ಬಗ್ಗೆ ಧನಾತ್ಮಕತೆಯನ್ನು ಪರೀಕ್ಷಿಸಿದ ನಂತರ ಅವರ ಅಭ್ಯಾಸಕ್ಕೆ ತಡೆ ಉಂಟಾಗಿತ್ತು. ಈ ಘಟನೆಯ ನಂತರ ಸುಮಾರು ಎರಡು ವಾರಗಳ ಕಾಲ ಆಟಗಾರರು ಐಸೋಲೇಶನ್‌ನಲ್ಲಿ ಕಳೆದರು. ಇದೀಗ ಆಟಗಾರರಿಗೆ ಮತ್ತೆ ಮೈದಾನಕ್ಕೆ ಕಾಲಿಡಲು ಅವಕಾಶ ನೀಡಲಾಗಿದೆ.

ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಶಿಷ್ಟಾಚಾರದಂತೆ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವರಲ್ಲಿ ಅರ್ಧದಷ್ಟು ಆಟಗಾರರು ಹಾಕಿ ಟರ್ಫ್ ನಲ್ಲಿ ತರಬೇತಿಯನ್ನು ಪುನರಾರಂಭಿಸಿದರೆ, ಉಳಿದವರು ಕೆಲವು ಫಿಟ್‌ನೆಸ್ ಡ್ರಿಲ್‌ಗಳೊಂದಿಗೆ ಅಭ್ಯಾಸ ಆರಂಭಿಸಿದರು. ಮಹಿಳಾ ಆಟಗಾರರ ಗುಂಪು ಬೆಳಗ್ಗೆ ಫುಟ್ಬಾಲ್ ಮೈದಾನದಲ್ಲಿ ಕಳೆಯಿತು. ಬಳಿಕ ಪುರುಷ ಆಟಗಾರರು ಸಹ ಅದೇ ಮಾದರಿಯನ್ನು ಅನುಸರಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಉಭಯ ತಂಡಗಳು ಅಭ್ಯಾಸ ನಡೆಸಿದವು. ದೀರ್ಘ ವಿರಾಮದ ನಂತರ ಹೊರಾಂಗಣ ತರಬೇತಿ ಪುನರಾರಂಭಗೊಂಡಿದ್ದರಿಂದ ಆಟಗಾರರು ಹಲವು ಸಮಸ್ಯೆ ಎದುರಿಸಿದರು. ಎರಡೂ ತಂಡಗಳ ಕೋಚ್ ಮತ್ತು ಸಹಾಯಕ ಕೋಚ್ ಆಟಗಾರರಿಂದ ಅಂತರವನ್ನು ಕಾಯ್ದುಕೊಳ್ಳಬೇಕಾಯಿತು. ಅಭ್ಯಾಸದ ನಂತರ ಟರ್ಫ್ ಮೇಲೆ ಸೋಂಕು ನಿವಾರಕವನ್ನು ಸಿಂಪಡಿಸಲಾಯಿತು.

ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ ಹಾಕಿ ತಂಡಗಳು ಅಭ್ಯಾಸ ಆರಂಭಿಸಿ ಸುಮಾರು ಒಂದು ತಿಂಗಳು ಕಳೆದ ಬಳಿಕ ಭಾರತದ ಹಾಕಿ ತಂಡಗಳು ಅಭ್ಯಾಸ ಆರಂಭಿಸಿವೆ. 2018ರ ವಿಶ್ವಕಪ್ ಫೈನಲಿಸ್ಟ್‌ಗಳಿಗೆ ಕಳೆದ ತಿಂಗಳು ಆಯಾ ಸರಕಾರಗಳು ಅಭ್ಯಾಸ ನಡೆಸಲು ಅನುಮತಿ ನೀಡಿದ್ದವು. ಭಾರತದ ಆಟಗಾರಂತೆ ಅವರೂ ಸಹ ತಮ್ಮ 90 ನಿಮಿಷಗಳ ಆಟದಲ್ಲಿ ಕನಿಷ್ಠ 1.5 ವಿ ುೀಟರ್ ದೂರವನ್ನು ಕಾಯ್ದುಕೊಳ್ಳಬೇಕಾಗಿದೆ. ಆಸ್ಟ್ರೇಲಿಯದ ಆಟಗಾರರು ಟರ್ಫ್‌ನಲ್ಲಿ ತರಬೇತಿ ಪುನರಾರಂಭಿಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News