×
Ad

ಬೆಂಗಳೂರು: ಗಂಡು ಮಗುವಿಗೆ ಜನ್ಮ ನೀಡಿದ ಕೊರೋನ ಸೋಂಕಿತೆ

Update: 2020-06-03 21:16 IST

ಬೆಂಗಳೂರು, ಜೂ.3: ಕೊರೋನ ಸೋಂಕಿತ ಗರ್ಭಿಣಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದ್ದು ಕೊರೋನ ಸೋಂಕಿನಿಂದ ಪಾರಾಗಿದೆ. 

ಯಲಹಂಕದ ಮಿನಿವಿಧಾನಸೌಧದ ಬಳಿಯಿರುವ ಸುಗ್ಗಪ್ಪ ಲೇಔಟ್ ನಿವಾಸಿಯಾದ ಗರ್ಭಿಣಿ ಮಹಿಳೆಗೆ ಕೊರೋನ ಸೋಂಕು ತಗಲಿತ್ತು. ಗರ್ಭಿಣಿಯಾಗಿರುವ ಕಾರಣ ಹುಟ್ಟುವ ಮಗುವಿಗೂ ಸೋಂಕು ತಗಲಬಹುದು ಎಂಬ ಆತಂಕವಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಬುಧವಾರ ಹೆರಿಗೆಯಾಗಿದ್ದು ಗಂಡು ಮಗು ಜನಿಸಿದೆ. ಮಗು 3.6 ಕೆಜಿ ತೂಕವಿದ್ದು, ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಯಿಯಿಂದ ಮಗುವಿಗೆ ಸೋಂಕು ಹರಡಬಹುದು ಎಂಬ ಭಯವಿತ್ತು. ಆದರೆ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ತಾಯಿಗೆ ಸೋಂಕು ಇದ್ದರೂ ರೋಗದ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದ್ದರಿಂದ ಮಗುವಿಗೆ ಸೋಂಕು ತಗುಲಿಲ್ಲ. ತಾಯಿಯೂ ಇದರಿಂದ ಬೇಗ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗು ಸೋಂಕು ರಹಿತವಾಗಿರುವುದು ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದೆ. ವೈದ್ಯರೂ ಸಹ ಸಿಸೇರಿಯನ್ ಮಾಡಿ ಮಗುವಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News