700 ಭಾರತೀಯರೊಂದಿಗೆ ಮಾಲ್ದೀವ್ಸ್‌ನಿಂದ ಹೊರಟ ಐಎನ್‌ಎಸ್ ಜಲಾಶ್ವ

Update: 2020-06-05 16:42 GMT

ಮಾಲೆ(ಮಾಲ್ದೀವ್ಸ್),ಜೂ.5: ‘ವಂದೇ ಭಾರತ ’ಅಭಿಯಾನದ ಅಂಗವಾಗಿ ‘ಸಮುದ್ರ ಸೇತು’ ಕಾರ್ಯಾಚರಣೆಯ ಎರಡನೇ ಹಂತದಲ್ಲಿ ಭಾರತೀಯ ನೌಕಾಪಡೆಯ ಹಡಗು ಐಎನ್‌ಎಸ್ ಜಲಾಶ್ವ ಶುಕ್ರವಾರ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಮಾಲ್ದೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 700 ಭಾರತೀಯರನ್ನು ಹೊತ್ತುಕೊಂಡು ತಾಯ್ನಿಡಿನತ್ತ ಪ್ರಯಾಣವನ್ನು ಆರಂಭಿಸಿದೆ.

ಜೂನ್ 1ರಂದು ಈ ಹಡಗು ಶ್ರೀಲಂಕಾದ ಕೊಲಂಬೋದಿಂದ ಸುಮಾರು 700 ಭಾರತೀಯರನ್ನು ತಮಿಳುನಾಡಿನ ತೂತ್ತುಕುಡಿಗೆ ಸಾಗಿಸಿತ್ತು. ಇದು ಮಾಲ್ದೀವ್ಸ್‌ಗೆ ಐಎನ್‌ಎಸ್ ಜಲಾಶ್ವದ ಮೂರನೇ ಯಾತ್ರೆಯಾಗಿದ್ದು,ಮೇ 8 ಮತ್ತು ಮೇ 16ರಂದು ಒಟ್ಟು 1,286 ಭಾರತೀಯರನ್ನು ಅದು ತೆರವುಗೊಳಿಸಿತ್ತು.

ಮಾಲೆಯ ಬಳಿಕ ಹಡಗು ಭಾರತೀಯರ ತೆರವು ಕಾರ್ಯಾಚರಣೆಗಾಗಿ ಇರಾನಿನ ಬಂದರ್ ಅಬ್ಬಾಸ್‌ಗೆ ಪ್ರಯಾಣಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News