400 ಮೀ. ಓಟದ ವಿಶ್ವ ಚಾಂಪಿಯನ್ ನಾಸರ್ ತಾತ್ಕಾಲಿಕ ಅಮಾನತು

Update: 2020-06-05 18:14 GMT

ದೋಹಾ, ಜೂ.5: ಸ್ವತಃ ಡೋಪಿಂಗ್ ನಿಗ್ರಹ ಪರೀಕ್ಷೆಗಳಲ್ಲಿ ಹಾಜರಾಗಲು ವಿಫಲವಾಗಿರುವ ಮಹಿಳೆಯರ 400 ಮೀ.ವಿಶ್ವ ಚಾಂಪಿಯನ್ ಬಹರೈನ್‌ನ ಸಲ್ವಾ ಈದ್ ನಾಸರ್‌ರನ್ನು ಅಥ್ಲೆಟಿಕ್ಸ್ ಸಮಗ್ರ ಘಟಕ(ಎಐಯು)ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂದು ಶುಕ್ರವಾರ ತಿಳಿಸಿದೆ.

ಕಳೆದ ವರ್ಷ ದೋಹಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 48.14 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ನಾಸರ್ ಚಿನ್ನದ ಪದಕ ಜಯಿಸಿದ್ದರು. ಮಾತ್ರವಲ್ಲ ಅಥ್ಲೆಟಿಕ್ಸ್ ಇತಿಹಾಸದ ಮೂರನೇ ಅತ್ಯಂತ ವೇಗದ ಸಮಯದಲ್ಲಿ ಈ ಸಾಧನೆ ಮಾಡಿದ್ದರು.

ಡೋಪಿಂಗ್ ಪರೀಕ್ಷೆಗೆ ಹಾಜರಾಗಲು ವಿಫಲವಾಗಿರುವುದು ಹಾಗೂ ವಿಶ್ವ ಅಥ್ಲೆಟಿಕ್ಸ್ ಉದ್ದೀಪನ ದ್ರವ್ಯ ನಿಗ್ರಹ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಎಐಯು ನಾಸರ್‌ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂದು ಎಐಯು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News