ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುವ ಈ ಐದು ತಪ್ಪುಗಳು ನಿಮಗೆ ಗೊತ್ತಿರಲಿ

Update: 2020-06-07 18:07 GMT

ಕೊಲೆಸ್ಟ್ರಾಲ್ ನಮ್ಮ ಶರೀರದಲ್ಲಿರುವ ಮೇಣ ಮತ್ತು ಕೊಬ್ಬಿನಂತಹ ಘಟಕವಾಗಿದೆ. ನಾವು ಸೇವಿಸಿದ ಆಹಾರವನ್ನು ಜೀರ್ಣಗೊಳಿಸಲು ನೆರವಾಗುವ ಅದು ಹಾರ್ಮೋನ್ ಮತ್ತು ವಿಟಾಮಿನ್ ಡಿ ಅನ್ನು ತಯಾರಿಸುತ್ತದೆ. ಕೊಲೆಸ್ಟ್ರಾಲ್ ಈಗಾಗಲೇ ನಮ್ಮ ಜೀವಕೋಶಗಳಲ್ಲಿರುತ್ತದೆ ಮತ್ತು ಅಗತ್ಯವಾದಾಗ ಶರೀರವು ಅದನ್ನು ತಯಾರಿಸುತ್ತದೆ. ಮೊಟ್ಟೆಯ ಹಳದಿ ಭಾಗ,ಮಾಂಸ ಮತ್ತು ಚೀಸ್‌ಗಳಂತಹ ಪ್ರಾಣಿಮೂಲಗಳ ಆಹಾರದಲ್ಲಿಯೂ ಕೊಲೆಸ್ಟ್ರಾಲ್ ಇರುತ್ತದೆ.

ಕೊಲೆಸ್ಟ್ರಾಲ್ ಅತಿಯಾದರೆ ಹೃದ್ರೋಗ, ಪಾರ್ಶ್ವವಾಯು ಮತ್ತು ಬಾಹ್ಯ ರಕ್ತನಾಳ ರೋಗ ಸೇರಿದಂತೆ ಹೃದಯನಾಳೀಯ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನುಂಟು ಮಾಡಬಹುದು. ಅದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗಬಹುದು. ಹೀಗಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಾರಣವಾಗುವ ನಮ್ಮ ಜೀವನಶೈಲಿ ತಪ್ಪುಗಳನ್ನು ತಿದ್ದಿಕೊಳ್ಳುವುದು ಅಗತ್ಯವಾಗುತ್ತದೆ. ಅಂತಹ ಐದು ತಪ್ಪುಗಳ ಕುರಿತು ಮಾಹಿತಿಗಳಿಲ್ಲಿವೆ......

* ವ್ಯಾಯಾಮ ಮಾಡದಿರುವುದು

ದೇಹತೂಕದಲ್ಲಿ ಹೆಚ್ಚಳವು ನಮ್ಮ ರಕ್ತಕೋಶಗಳಲ್ಲಿ ಎಲ್‌ಡಿಲ್(ಲೋ ಡೆನ್ಸಿಟಿ ಲಿಪೊಪ್ರೋಟಿನ್) ಅಥವಾ ಕೆಟ್ಟ ಕೊಲೆಸ್ಟ್ರಾಲ್‌ನ ಹರಿವಿಗೆ ಕಾರಣವಾಗುವುದರಿಂದ ಶರೀರದ ತೂಕವನ್ನು ಕಾಯ್ದುಕೊಳ್ಳಲು ವ್ಯಾಯಾಮವು ನೆರವಾಗುತ್ತದೆ. ಎಲ್‌ಡಿಎಲ್ ಹೃದ್ರೋಗಗಳಿಗೆ ಕಾರಣವಾಗುತ್ತದೆ. ವ್ಯಾಯಾಮವು ಎಲ್‌ಡಿಎಲ್ ರಕ್ತದಿಂದ ಯಕೃತ್ತಿಗೆ ಸಾಗಲು ನೆರವಾಗುತ್ತದೆ ಮತ್ತು ಅಲ್ಲಿ ಅದು ಹೊರಹಾಕಲ್ಪಡುತ್ತದೆ ಅಥವಾ ಪಿತ್ತರಸವಾಗಿ ಪರಿವರ್ತಿಸಲ್ಪಡುತ್ತದೆ. ವ್ಯಾಯಾಮವು ಕೊಲೆಸ್ಟ್ರಾಲ್‌ನ್ನು ಸಾಗಿಸುವ ಪ್ರೋಟಿನ್ ಕಣಗಳ ಗಾತ್ರವನ್ನೂ ಹೆಚ್ಚಿಸುತ್ತದೆ. ಪ್ರತಿದಿನ 30-45 ನಿಮಿಷಗಳ ವಾಕಿಂಗ್,ಜಾಗಿಂಗ್,ಸೈಕಲ್ ಸವಾರಿ,ಯೋಗ,ಡ್ಯಾನ್ಸಿಂಗ್ ಅಥವಾ ಎರೋಬಿಕ್ಸ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ.

* ಅನಾರೋಗ್ಯಕರ ಆಹಾರ

ಕರಿದ ತಿಂಡಿಗಳು,ಫಾಸ್ಟ್ ಪುಡ್,ಸಾಸೇಜ್,ಬೇಕನ್ ಮತ್ತು ಹಾಟ್ ಡಾಗ್‌ಗಳಂತಹ ಸಂಸ್ಕರಿತ ಮಾಂಸ ಖಾದ್ಯಗಳು,ಕುಕೀಸ್, ಕೇಕ್, ಐಸ್‌ಕ್ರೀಮ್, ಪೇಸ್ಟ್ರಿ, ಪ್ರಿಪ್ಯಾಕ್ಡ್ ಆಹಾರ ಮತ್ತು ಮೈಕ್ರೋವೇವ್ ಪಾಪ್‌ಕಾನ್ ಇತ್ಯಾದಿ ಅತಿಯಾದ ಪರಿಷ್ಕೃತ ಕೊಬ್ಬನ್ನು ಒಳಗೊಂಡಿರುವ ಆಹಾರಗಳ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಖರೀದಿಸುವ ಆಹಾರದ ಪೊಟ್ಟಣದ ಮೇಲಿನ ವಿವರಗಳನ್ನು ಪರಿಶೀಲಿಸಿ ಮತ್ತು ಅದು ಭಾಗಶಃ ಹೈಡ್ರೋಜನೀಕರಿಸಿದ ತೈಲವನ್ನು ಒಳಗೊಂಡಿದ್ದರೆ ಅದರ ಗೊಡವೆಗೆ ಹೋಗಬೇಡಿ. ಓಟ್ಸ್, ಹಣ್ಣುಗಳು, ಅವರೆ, ಬೇಳೆಗಳು ಅಥವಾ ತರಕಾರಿಗಳಂತಹ ಹೆಚ್ಚು ನಾರನ್ನೊಳಗೊಂಡಿರುವ ಆಹಾರಗಳನ್ನು ಸೇವಿಸಿ. ಪಾಲಿಅನ್‌ಸ್ಯಾಚ್ಯುರೇಟೆಡ್ ಮತ್ತು ಮೊನೊಅನ್‌ಸ್ಯಾಚ್ಯುರೇಟೆಡ್ ಕೊಬ್ಬುಗಳನ್ನು ಒಳಗೊಂಡಿರುವ ಸಿಹಿನೀರಿನ ಮೀನು, ಸಾಲ್ಮನ್, ಅವೊಕಾಡೊದಂತಹ ಆಹಾರಗಳು ಹಾಗೂ ಸ್ಯಾಫ್‌ಫ್ಲವರ್, ಕನೋಲಾ, ಸೂರ್ಯಕಾಂತಿ ಅಥವಾ ಆಲಿವ್‌ನಂತಹ ಖಾದ್ಯತೈಲಗಳನ್ನು ಆಯ್ಕೆ ಮಾಡಿಕೊಳ್ಳಿ. ಅನಾರೋಗ್ಯಕರ ಆಹಾರ ಸೇವನೆಯು ಹೃದಯ ವೈಫಲ್ಯದ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ.

* ಧೂಮ್ರಪಾನ ಮತ್ತು ಮದ್ಯಪಾನ

ಧೂಮ್ರಪಾನವು ಎಚ್‌ಡಿಎಲ್ (ಹೈ ಡೆನ್ಸಿಟಿ ಲಿಪೊಪ್ರೋಟಿನ್) ಅಥವಾ ಒಳ್ಳೆಯ ಕೊಲೆಸ್ಟ್ರಾಲ್‌ನ ಮಟ್ಟವನ್ನು ತಗ್ಗಿಸುತ್ತದೆ ಮತ್ತು ರಕ್ತನಾಳಗಳ ಭಿತ್ತಿಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಮಧುಮೇಹ,ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಅಲ್ಲದೆ ಶೇ.90ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳಿಗೆ ಧೂಮ್ರಪಾನ ಕಾರಣ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಅತಿಯಾದ ಮದ್ಯಪಾನವು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸಬಹುದು.

* ಆರೋಗ್ಯ ತಪಾಸಣೆಗೆ ನಿರ್ಲಕ್ಷ

ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಸಾಮಾನ್ಯವಾಗಿ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಹೀಗಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

* ಔಷಧಿಗಳ ಸೇವನೆ ತಪ್ಪಿಸುವುದು

ವ್ಯಕ್ತಿಯು ಯಾವುದೇ ಕಾಯಿಲೆಯನ್ನು ಹೊಂದಿದ್ದರೆ ವೈದ್ಯರ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಅವರು ಶಿಫಾರಸು ಮಾಡಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸಬೇಕು. ವೈದ್ಯರ ಸಲಹೆ ಪಡೆಯದೆ ಔಷಧಿಗಳನ್ನು ಬದಲಿಸಿದರೆ ಅದು ಕೊಲೆಸ್ಟ್ರಾಲ್ ಮಟ್ಟವನ್ನು ವ್ಯತ್ಯಯಗೊಳಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೂ ಹಾನಿಯನ್ನುಂಟು ಮಾಡುತ್ತದೆ. ಔಷಧಿಗಳ ಸೇವನೆಯನ್ನು ತಪ್ಪಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ನಿಮಗೆ ಕೊಲೆಸ್ಟ್ರಾಲ್ ಇದ್ದರೆ ಔಷಧಿಗಳ ನಿಯಮಿತ ಸೇವನೆಯ ಜೊತೆಗೆ ನಿಮ್ಮ ವೈದ್ಯಕೀಯ ಸ್ಥಿತಿಗೆ ಸೂಕ್ತವಾದ ಆಹಾರ ಸೇವನೆಯೂ ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News