ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಬಂಧನ ಪ್ರಕರಣ: ದುಬಾರಿ ಕಾರು, 16 ಬೈಕ್ ಜಪ್ತಿ

Update: 2020-06-08 16:48 GMT

ಬೆಂಗಳೂರು, ಜೂ.8: ಕೋವಿಡ್-19 ನಿಯಮ ಉಲ್ಲಂಘಿಸಿ, ಮೆರವಣಿಗೆ ನಡೆಸಿದ ಆರೋಪದಡಿ ಬಿಬಿಎಂಪಿ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ಬಂಧನ ಪ್ರಕರಣದ ಸಂಬಂಧ ದುಬಾರಿ ಬೆಲೆಯ ಒಂದು ಕಾರು ಹಾಗೂ ಬೆಂಬಲಿಗರ 16 ಬೈಕ್‍ಗಳನ್ನು ಜೆ.ಜೆ. ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ 143, 145, 270, 290, 353 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಿಂದಿನ ಪ್ರಕರಣಗಳ ಬಗ್ಗೆ ಕೂಡ ನಾವು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ನಗರದ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ.

ಕೋವಿಡ್-19 ಸೋಂಕು ತಗ್ಗಿದ ಹಿನ್ನೆಲೆ ರವಿವಾರ ಇಮ್ರಾನ್ ಪಾಷಾ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಈ ಸಂದರ್ಭದಲ್ಲಿ ಅವರ ಬೆಂಬಲಿಗರು, ಅಭಿಮಾನಿಗಳು ಕೋವಿಡ್-19 ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಜೆಜೆ ನಗರ ಠಾಣಾ ಪೊಲೀಸರು ಇಮ್ರಾನ್ ಪಾಷಾ ಜತೆಗೆ 22 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News