×
Ad

ಬೆಂಗಳೂರು: ನಗರದಲ್ಲಿ 29 ಹೊಸ ಕೊರೋನ ಪ್ರಕರಣಗಳು ದೃಢ

Update: 2020-06-09 20:37 IST

ಬೆಂಗಳೂರು, ಜೂ.9: ನಗರದಲ್ಲಿ ಮಂಗಳವಾರ 29 ಜನರಿಗೆ ಕೊರೋನ ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಮಂಗಳವಾರ ಸಿಟಿ ಮಾರುಕಟ್ಟೆಯ ಪೊಲೀಸ್ ಠಾಣೆ ಕಾನ್‍ಸ್ಟೆಬಲ್‍ ಒಬ್ಬರಿಗೆ ಕೊರೋನ ಸೋಂಕು ತಗುಲಿದ್ದರಿಂದ ಠಾಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು ಮೂಲದ ರೋಗಿ ಸಂಖ್ಯೆ 4316ರ 65 ವರ್ಷದ ಪುರುಷನಿಗೆ ಜೂ.3 ರಂದು ಐಎಲ್‍ಐ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಬಳಿಕ ಕೊರೋನ ಸೋಂಕು ತಗುಲಿತ್ತು. ಆರು ದಿನಗಳು ಚಿಕಿತ್ಸೆ ಪಡೆದ ಅವರು ಮಂಗಳವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ನಗರದಲ್ಲಿ ಈವರೆಗೆ 19 ಜನ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ತೀವ್ರ ಉಸಿರಾಟ ತೊಂದರೆ, ಐಎಲ್‍ಐ ಹಾಗೂ ಸಾರಾದಿಂದ ಬಳಲುತ್ತಿದ್ದ ಐವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News