ಪೇದೆರಿಗೆ ಕೊರೋನ: ಹೆಣ್ಣೂರು ಪೊಲೀಸ್ ಠಾಣೆ ಸೀಲ್‍ಡೌನ್
Update: 2020-06-10 20:46 IST
ಬೆಂಗಳೂರು, ಜೂ.10: ಇಲ್ಲಿನ ಹೆಣ್ಣೂರು ಪೊಲೀಸ್ ಠಾಣೆಯ ಪೇದೆಯೋರ್ವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ಇಡೀ ಠಾಣೆಯನ್ನು ಎರಡು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ.
ಹೆಣ್ಣೂರು ಠಾಣೆಯ 32 ವರ್ಷದ ಪೇದೆ ಸೋಂಕಿತ ವ್ಯಕ್ತಿ ಎನ್ನಲಾಗಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಮಂದಿ ಸಿಬ್ಬಂದಿ ಸೇರಿದಂತೆ ಅವರ ಪತ್ನಿ ಹಾಗೂ ಮಗುವನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.