ಬೆಂಗಳೂರು ಜಲಮಂಡಳಿ: ಜೂ.11ರಂದು ನೀರಿನ ಅದಾಲತ್

Update: 2020-06-10 15:34 GMT

ಬೆಂಗಳೂರು, ಜೂ.10: ಬೆಂಗಳೂರು ಜಲಮಂಡಳಿಯ ಪೂರ್ವ-1,2,3, ದಕ್ಷಿಣ-2, ಆಗ್ನೇಯ-4, ಪಶ್ಚಿಮ-2, ನೈರುತ್ಯ-2, ಆಗ್ನೇಯ-2, ವಾಯವ್ಯ-3, ಕೇಂದ್ರ-2, ಉತ್ತರ-2, ಈಶಾನ್ಯ-1 ಮತ್ತು ಉತ್ತರ ವಿಲೇಜ್-1 ಉಪವಿಭಾಗಗಳ ನೀರಿನ ಅದಾಲತ್ ಜೂ.11ರಂದು ಬೆಳಿಗ್ಗೆ 9:30ರಿಂದ 11 ಗಂಟೆಯವರೆಗೆ ಸ್ಥಳೀಯ ಸಹಾಯಕ ಕಾರ್ಯನಿರ್ವಾಹಕ ಎಂಜಿಯರ್‍ಗಳ ಕಚೇರಿಗಳಲ್ಲಿ ನಡೆಯಲಿವೆ.

ಸಾರ್ವಜನಿಕರು ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತ್ತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು.

ಮಾಹಿತಿಗೆ ಸಹಾಯವಾಣಿ ಸಂಖ್ಯೆ 1916 ಅಥವಾ ವಾಟ್ಸ್ ಆಪ್ ಸಂಖ್ಯೆ-8762228888ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News