ಜೂ.29ರಂದು ವಿಧಾನಪರಿಷತ್ ಚುನಾವಣೆ: ಕೋವಿಡ್-19 ಮಾರ್ಗಸೂಚಿ ಪ್ರಕಟ

Update: 2020-06-13 14:53 GMT

ಬೆಂಗಳೂರು, ಜೂ.13: ವಿಧಾನಪರಿಷತ್ ಚುನಾವಣೆ ಜೂ.29 ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್-19 ಸಂಬಂಧ ಅನುಸರಿಸಬೇಕಾದ ಸುರಕ್ಷತಾ ಮಾರ್ಗಸೂಚಿಗಳನ್ನು ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಪ್ರಕಟಿಸಿದ್ದಾರೆ.

ಚುನಾವಣೆ ವೇಳೆ ಚುನಾವಣಾ ಅಧಿಕಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಕ್ರಮ ವಹಿಸಬೇಕು. ಚುನಾವಣಾ ಪ್ರಕ್ರಿಯೆ ವೇಳೆ ಚುನಾವಣಾ ಸಿಬ್ಬಂದಿ, ಮತದಾರರು, ಏಜೆಂಟ್‍ಗಳು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಬೇಕು.

ಚುನಾವಣಾಧಿಕಾರಿಯಿಂದ ಅನುಮತಿ ಪಡೆದ ಅಭ್ಯರ್ಥಿಗಳು, ಮತದಾರರು, ಏಜೆಂಟ್‍ಗಳು, ಚುನಾವಣಾ ಸಿಬ್ಬಂದಿ ಕಂಟೈನ್ಮೆಂಟ್ ವಲಯದಲಿದ್ದರೆ ಅವರಿಗೆ ಚುನಾವಣೆ ಉದ್ದೇಶಕ್ಕಾಗಿ ಮಾತ್ರ ಅನಿರ್ಬಂಧಿತ ಓಡಾಟಕ್ಕೆ ಅನುಮತಿ ನೀಡಬಹುದಾಗಿದೆ. ಅದೇ ರೀತಿ 65 ವರ್ಷ ಮೇಲ್ಪಟ್ಟ ಮತದಾರರು, ಅಭ್ಯರ್ಥಿಗಳು, ಚುನಾವಣಾ ಸಿಬ್ಬಂದಿಗೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.

ಎಲ್ಲಾ ಜಿಲ್ಲಾಧಿಕಾರಿಗಳು ಕ್ಯಾರಂಟೈನ್‍ನಲ್ಲಿರುವ ಶಾಸಕರ ವಿವರ ಹಾಗೂ ಅವರ ಪ್ರಯಾಣ ವೇಳಾಪಟ್ಟಿಯನ್ನು ನೀಡಬೇಕು. ಜತೆಗೆ ಎಲ್ಲ ಅಭ್ಯರ್ಥಿಗಳು, ಮತದಾರರಿಗೆ ಸಂಚಾರದ ವ್ಯವಸ್ಥೆಯನ್ನು ಮಾಡಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News