×
Ad

ಜೋಪಡಿಗಳಿಗೆ ಬೆಂಕಿ ಹಚ್ಚಿದ ವಿಚಾರ: ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು- ಹೈಕೋರ್ಟ್

Update: 2020-06-13 23:04 IST

ಬೆಂಗಳೂರು, ಜೂ.13: ಕಾಚರಕನಹಳ್ಳಿ ವ್ಯಾಪ್ತಿಯ ಕೊಳೆಗೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸೇರಿದ 90ಕ್ಕೂ ಹೆಚ್ಚು ಜೋಪಡಿಗಳಿಗೆ ಬೆಂಕಿ ಹಚ್ಚಿರುವುದು ಅಹಿತಕರ ಎಂದು ಹೈಕೋರ್ಟ್ ಹೇಳಿದೆ.

ವಕೀಲೆ ವೈಶಾಲಿ ಹೆಗ್ಡೆ ಬರೆದಿದ್ದ ಪತ್ರ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಜೋಪಡಿಗಳಿಗೆ ಬೆಂಕಿ ಹಚ್ಚಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿ ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಲಾಕ್‍ಡೌನ್ ಜಾರಿ ಪರಿಸ್ಥಿತಿಯ ಲಾಭ ಪಡೆದು ಬಡ ಕಾರ್ಮಿಕರ ಜೋಪಡಿಗಳಿಗೆ ಬೆಂಕಿ ಹಚ್ಚಿರುವುದು ನಿಜಕ್ಕೂ ದುರದೃಷ್ಟಕರ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸರಕಾರಕ್ಕೆ ನ್ಯಾಯಪೀಠವು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News