ಮುಸ್ಲಿಂ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಮನವಿ

Update: 2020-06-13 18:06 GMT

ಬೆಂಗಳೂರು, ಜೂ.13: ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚು ಮಾಡುವಂತೆ ಎಸ್.ಸಿ, ಎಸ್.ಟಿ ಮೀಸಲಾತಿ ಆಯೋಗಕ್ಕೆ ಉಮ್ಮತ್ ಚಿಂತಕರ ವೇದಿಗೆ ಮನವಿ ಸಲ್ಲಿಸಿದೆ.

ಎಸ್.ಸಿ, ಎಸ್.ಟಿ ಮೀಸಲಾತಿ ಆಯೋಗದ ಅಧ್ಯಕ್ಷ ನಾಗಮೋಹನ್ ದಾಸ್ ಅವರಿಗೆ ಉಮ್ಮತ್ ಚಿಂತಕರ ವೇದಿಕೆಯ ಅಧ್ಯಕ್ಷ ಅನೀಶ್ ಪಾಶ ಅವರು ಮನವಿ ಸಲ್ಲಿಸಿ, ಮುಸ್ಲಿಂ ಸಮುದಾಯದವರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದಿನ ಕಾಲದಲ್ಲಿ ಎಸ್.ಸಿ, ಎಸ್.ಟಿ ಜನಾಂಗದ ಜನರು ಶೋಷಣೆ ಮಾಡುತ್ತಿದ್ದರೋ ಮತ್ತು ಅಸ್ಪೃಶ್ಯರನ್ನಾಗಿ ನೋಡುತ್ತಿದ್ದರೋ ಅದೇ ರೀತಿ ಮುಸ್ಲಿಂ ಸಮುದಾಯದವರನ್ನು ಕೀಳಾಗಿ ನೋಡಲಾಗುತ್ತಿದೆ. ಆದ್ದರಿಂದ ಮುಸ್ಲಿಂ ಸಮುದಾಯದ ಏಳಿಗೆಗಾಗಿ ಮತ್ತು ಹಿತರಕ್ಷಣೆಗಾಗಿ ಮೊದಲ ಆದ್ಯತೆಯಲ್ಲಿ ಸರಕಾರ ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಯಾವ ರೀತಿ ಮೀಸಲಾತಿ ನೀಡುತ್ತದೆಯೋ ಅದೇ ರೀತಿ ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಸರಕಾರಕ್ಕೆ ವರದಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News