ಟ್ರ್ಯಾಕ್ಟರ್ ಢಿಕ್ಕಿ: ರಸ್ತೆ ಬದಿ ನಿಂತಿದ್ದ ಮಹಿಳೆ ಸಾವು
Update: 2020-06-14 23:02 IST
ಬೆಂಗಳೂರು, ಜೂ.14: ರಸ್ತೆ ಬದಿ ನಿಂತಿದ್ದ ಮಹಿಳೆಯೊಬ್ಬಕೆ ಮೇಲೆ ಏಕಾಏಕಿ ಟ್ರ್ಯಾಕ್ಟರ್ ಹರಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಲ್ಲಿನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಮಾ(26) ಎಂಬಾಕೆ ಮೃತಪಟ್ಟಿರುವ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ.
ನಗರದ ಅರಳು ಮಲ್ಲಿಗೆ ಬಳಿ ರಸ್ತೆ ಬದಿ ಉಮಾ ತನ್ನ ಮಗುವಿನ ಜೊತೆ ನಿಂತಿದ್ದರು. ಈ ವೇಳೆ ಏಕಾಏಕಿ ಟ್ರ್ಯಾಕ್ಟರ್ ನುಗ್ಗಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಮೃತ ಮಹಿಳೆ ನಾಗಸಂದ್ರ ನಿವಾಸಿ ಎಂದು ತಿಳಿದುಬಂದಿದೆ.