'ಸುರಕ್ಷತೆಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ': ಬಿಎಂಟಿಸಿ ನೌಕರರ ಪ್ರತಿಭಟನೆ

Update: 2020-06-14 17:51 GMT

ಬೆಂಗಳೂರು, ಜೂ.14: ತಮ್ಮ ಸುರಕ್ಷತೆಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಬಿಎಂಟಿಸಿ ನೌಕರರು ಭಾನುವಾರ ಕೋರಮಂಗಲದ ಡಿಪೋದ ಮುಂಭಾಗ ಪ್ರತಿಭಟನೆ ನಡೆಸಿದರು.

ಬಿಎಂಟಿಸಿಯಿಂದ ನೌಕರರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡುತ್ತಿಲ್ಲ. ಇದರಿಂದ ನಮಗೆ ಕೊರೋನ ಸೋಂಕಿನ ಬಗ್ಗೆ ಆತಂಕವಿದೆ. ಈಗಾಗಲೇ ಕೆಲ ನೌಕರರಿಗೆ ಸೋಂಕು ತಗಲಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯ. ಆದರೆ, ಅದು ಮರೆತಂತೆ ಕಾಣುತ್ತಿದೆ ಎಂದು ಬಿಎಂಟಿಸಿ ನೌಕರರು ದೂರಿದ್ದಾರೆ.

ಕೆಲವೊಂದ ಬಾರಿ ನಮಗೆ ಕೆಲಸಕ್ಕೆ ಹಾಜರಾದರೂ ಬಸ್ ಓಡಿಸಲು ಅವಕಾಶ ನೀಡುತ್ತಿಲ್ಲ. ರಜೆ ನೀಡುತ್ತಿದ್ದಾರೆ. ನಾವು ಈ ಆತಂಕದಲ್ಲೇ ಕಾರ್ಯ ನಿರ್ವಹಿಸುವುದಾದರೂ ಹೇಗೆ ಎಂದು ಕಿಡಿಕಾರಿದ್ದಾರೆ.

ನಗರದ ಹಲವು ಪ್ರದೇಶಗಳಲ್ಲಿ ಕೊರೋನ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದು, ಅಲ್ಲಿ ನಾವು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೂ ಕೆಲವೊಂದು ಬಾರಿ ಮಾನವೀಯತೆ ದೃಷ್ಟಿಯಿಂದಲೂ ನೋಡಲಾಗುತ್ತಿದೆ. ಈಗಲಾದರೂ ನಮ್ಮ ಸುರಕ್ಷತೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News