ಸದ್ಯದಲ್ಲೇ ಬಳಕೆದಾರರಿಗೆ ಸಿಹಿಸುದ್ದಿ ನೀಡಲಿರುವ ವಾಟ್ಸ್ಯಾಪ್ !

Update: 2020-06-15 11:00 GMT

ನ್ಯೂಯಾರ್ಕ್: ವಾಟ್ಸ್ಯಾಪ್ ಬಳಕೆದಾರರು ಕನಿಷ್ಠ ನಾಲ್ಕು ಡಿವೈಸ್ ಗಳಲ್ಲಿ ಏಕಕಾಲದಲ್ಲಿ ತಮ್ಮ ಒಂದು ಖಾತೆಯನ್ನು ಬಳಸಲು ಸಾಧ್ಯವಾಗುವ ನಿಟ್ಟಿನಲ್ಲಿ ಫೇಸ್ ಬುಕ್ ಒಡೆತನದ ವಾಟ್ಸ್ಯಾಪ್ ಸಂಸ್ಥೆ ತಯಾರಿ ನಡೆಸುತ್ತಿದೆ.

ಆದರೆ ಈ ಬಹು-ಸಾಧನ  ವ್ಯವಸ್ಥೆ (ಮಲ್ಟಿ ಡಿವೈಸ್ ಸಪೋರ್ಟ್) ಯಾವ ರೀತಿಯಲ್ಲಿ ಖಾಸಗಿತನ ಮತ್ತು ಇತರ ಮಾಹಿತಿ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳನ್ನು ನಿಭಾಯಿಸಲಿದೆ ಎಂಬ ಕುರಿತು ಸ್ಪಷ್ಟತೆಯಿಲ್ಲ.

ವಾಟ್ಸ್ಯಾಪ್‍ನ ಈ ಪ್ರಸ್ತಾವಿತ ಮಲ್ಟಿ-ಡಿವೈಸ್ ಸಪೋರ್ಟ್ ಫೀಚರ್ ಅಭಿವೃದ್ಧಿಪಡಿಸುವ ಹಂತದಲ್ಲಿದೆ. ಆದರೆ ಈ ಫೀಚರ್ ಬಳಕೆಗೆ ವೈ ಫೈ ಅಗತ್ಯವಿದೆ ಎಂದು ಡಬ್ಲ್ಯುಎಬೇಟಾಇನ್ಫೋ ಎಂಬ ವೆಬ್ ತಾಣ ಮಾಹಿತಿ ನೀಡಿದೆ.

ವಾಟ್ಸ್ಯಾಪ್ ಸದ್ಯದಲ್ಲೇ ಈ ಫೀಚರನ್ನು ಹೊರತರಲಿದ್ದು, ಆನಂತರ ಬಳಕೆದಾರರು ಏಕಕಾಲಕ್ಕೆ ಈ ಮೆಸೆಜಿಂಗ್ ಆ್ಯಪನ್ನು ನಾಲ್ಕು ಡಿವೈಸ್ ಗಳಲ್ಲಿ ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News