×
Ad

ರೌಡಿ ಶ್ರೀನಿವಾಸ್ ಕೊಲೆ ಪ್ರಕರಣ: 9 ಆರೋಪಿಗಳ ಬಂಧನ

Update: 2020-06-15 17:03 IST

ಬೆಂಗಳೂರು, ಜೂ.15: ರೌಡಿ ಶ್ರೀನಿವಾಸ್ ಕೊಲೆ ಪ್ರಕರಣ ಸಂಬಂಧ 9 ಮಂದಿ ಆರೋಪಿಗಳನ್ನು ಎಚ್‍ಎಎಲ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬನಶಂಕರಿಯ ಪ್ರಗತಿಪುರದ ಸಂತೋಷ್(26), ಬಾಲಸುಬ್ರಹ್ಮಣ್ಯನ್(29), ಸುರೇಶ(21), ಜೆಪಿ ನಗರದ ವಿಜಯ್(24), ಕೋಣನಕುಂಟೆ ಕ್ರಾಸ್‍ನ ಪೀಟರ್ ಕುಮಾರ್(27), ಬನಶಂಕರಿಯ ಲೋಕೇಶ್(23), ಕುಮಾರಸ್ವಾಮಿ ಲೇಔಟ್‍ನ ನವಾಝ್(22), ದಿಲೀಪ್(22) ಹಾಗೂ ನ್ಯಾಮತ್(27) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಜೂ.7 ರಂದು ಎಚ್‍ಎಎಲ್‍ನ ಎಲ್‍ಬಿ ಶಾಸ್ತ್ರಿ ನಗರದ ಮನೆಯೊಂದರಲ್ಲಿ ಜೆಪಿ ನಗರದ ರೌಡಿ ಶ್ರೀನಿವಾಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಎಚ್‍ಎಎಲ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಶ್ರೀನಿವಾಸ್, ಜೆಪಿ ನಗರದ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಆತನ ವಿರುದ್ಧ ಜೆಪಿ ನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ಕೊಲೆಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಶ್ರೀನಿವಾಸ್ 2 ತಿಂಗಳ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಎಂದು ವೈಟ್‍ಫೀಲ್ಡ್ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News