×
Ad

ಕಥೆಗಾರ್ತಿ, ಲೇಖಕಿ ಪ್ರೇಮಾಭಟ್‍ಗೆ ಅನಕೃ ಪ್ರಶಸ್ತಿ

Update: 2020-06-16 21:31 IST

ಬೆಂಗಳೂರು, ಜೂ.16: ಬನಶಂಕರಿಯ ಅನಕೃ ಪ್ರತಿಷ್ಠಾನದ 2019ನೇ ಸಾಲಿನ 26ನೇ ಅನಕೃ ಪ್ರಶಸ್ತಿಯು ಕಥೆಗಾರ್ತಿ, ಲೇಖಕಿ ಪ್ರೇಮಾಭಟ್ ಅವರಿಗೆ ದೊರೆತಿದೆ.

ಪ್ರತಿಷ್ಠಾನದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೇಮಾಭಟ್, ಅನಕೃ ಅವರ ಬದುಕು, ಬರಹ ನಮಗೆ ಸ್ಪೂರ್ತಿ ಹಾಗೂ ಆದರ್ಶವಾಗಿದೆ. ಕೃಷಿಕ ಕುಟುಂಬದಿಂದ ಬಂದ ನನಗೆ ಹೆಣ್ಣಿನ ಬಾಳಿನ ಬವಣೆಗಳು ಪರಿಚಯವಿದ್ದು ಅವುಗಳನ್ನು ಸಾಂಸ್ಕೃತಿಕವಾಗಿ ಕಥೆ, ಕಾದಂಬರಿಗಳಲ್ಲಿ ಚಿತ್ರಿಸುವುದು ಸಹಕಾರಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಗೌತಮ್, ಸದಸ್ಯರಾದ ಎ. ಜಯಸಿಂಹ, ಚ. ಕಲ್ಯಾಣರಾಮನ್, ಶಾ.ಮಂ. ಕೃಷ್ಣರಾಯ, ಪ್ರೊ.ಜಿ. ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News