×
Ad

ತಲೆಮರೆಸಿಕೊಂಡಿದ್ದ ಕುಖ್ಯಾತ ಜರ್ಮನ್ ಬ್ರುನೋ ಬಂಧನ

Update: 2020-06-16 23:15 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.16: ಜರ್ಮನ್ ಮೂಲದ ಕುಖ್ಯಾತ ಅಲೆಕ್ಸಾಂಡರ್ ಬ್ರುನೋ ಎಂಬಾತನನ್ನು ಸಿಐಡಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಹೆಬ್ಬಗೋಡಿಯಲ್ಲಿ ತಲೆಮರೆಸಿಕೊಂಡಿದ್ದ ಅಲೆಕ್ಸಾಂಡರ್ ಬ್ರುನೋನನ್ನು ಸಿಐಡಿ ಇಂಟರ್ ಪೋಲ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಬಿ. ದಯಾನಂದ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಬಂಧಿಸಿದೆ.

ಅಲೆಕ್ಸಾಂಡರ್ ಬ್ರನೋ 2015ರಲ್ಲಿ ಓರ್ವನನ್ನು ಅಪಹರಣ ಮಾಡಿ ಸಿಕ್ಕಿಬಿದ್ದು ನಂತರ ಜರ್ಮನ್ ನಿಂದ ಪರಾರಿ ಆಗಿ ಭಾರತದಲ್ಲಿ ನೆಲೆಸಿದ್ದ. ಈ ಸಂಬಂಧ, ಇಂಟರ್ ಪೋಲ್ ತನಿಖಾಧಿಕಾರಿಗಳು, ಈತನಿಗೆ ಕಾರ್ನರ್ ನೊಟೀಸ್ ಜಾರಿ ಮಾಡಿದ್ದರು. ತದನಂತರ, ಕಾರ್ಯಾಚರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಈತ ಹೆಬ್ಬಗೋಡಿಯ ಹುಲಿಮಂಗಲ ಗ್ರಾಮದಲ್ಲಿ ತಂಗಿದ್ದ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತನ ವಿರುದ್ಧ ವಿದೇಶಿ ಕಾಯ್ದೆ ಅಡಿಯಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆಗೊಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News