ಐಎಎಸ್, ಐಎಫ್‍ಎಸ್ ಅಧಿಕಾರಿ ವರ್ಗಾವಣೆ
Update: 2020-06-20 22:25 IST
ಬೆಂಗಳೂರು, ಜೂ.20: ಐಎಎಸ್ ಅಧಿಕಾರಿ ಪೆದ್ದಪ್ಪಯ್ಯ ಆರ್.ಎಸ್. ಅವರನ್ನು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಎಕ್ಸ್-ಅಫಿಶಿಯೊ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಐಎಫ್‍ಎಸ್ ಅಧಿಕಾರಿ ಪ್ರಭಾಶ್ ಚಂದ್ರ ರಾಯ್ ಅವರನ್ನು ತತ್‍ಕ್ಷಣದಿಂದಲೆ ಜಾರಿಗೆ ಬರುವಂತೆ ರಾಜ್ಯ ಗಣಿ ಪರಿಸರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯುಕ್ತಿ ಮಾಡಿ ಆದೇಶ ಹೊರಡಿಸಲಾಗಿದೆ.