×
Ad

ಬೆಂಗಳೂರು: ಕೆಎಸ್‍ಆರ್ ಪಿಯ 6 ಪೊಲೀಸರಿಗೆ ಕೊರೋನ ಪಾಸಿಟಿವ್

Update: 2020-06-22 21:26 IST

ಬೆಂಗಳೂರು, ಜೂ.22: ದಿನೇ ದಿನೇ ಪೊಲೀಸರಿಗೆ ಕೊರೋನ ಸೋಂಕು ತಗಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಲ್ಲಿನ ಕೋರಮಂಗಲದಲ್ಲಿ ನಿಯೋಜನೆಯಾಗಿರುವ ಕೆಎಸ್‍ಆರ್‍ಪಿಯ ನಾಲ್ಕನೆ ಪಡೆಯ 6 ಪೊಲೀಸ್ ಸಿಬ್ಬಂದಿಗೆ ಕೊರೋನ ದೃಢಪಟ್ಟಿದೆ.

ಸೋಮವಾರ ಮುಂಜಾಗ್ರತ ಕ್ರಮವಾಗಿ 58 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಈ ಪ್ರಕರಣಗಳು ಸೇರಿಕೊಂಡು ಕೆಎಸ್‍ಆರ್‍ಪಿ 4ನೆ ಪಡೆಯಲ್ಲಿ ಒಟ್ಟು 11 ಮಂದಿಗೆ ಕೋವಿಡ್-19 ಕಾಣಿಸಿಕೊಂಡಿದೆ.

ಕೆಎಸ್‍ಆರ್ಪಿ ತುಕಡಿ ಸಿಬ್ಬಂದಿ ಕಂಟೈನ್‍ಮೆಂಟ್ ಪ್ರದೇಶಗಳಿಗೆ ತೆರಳಿ ಭದ್ರತೆಯನ್ನು ನೋಡಿಕೊಳ್ತಾರೆ. ಒಂದು ವಾರ ಕಾಲ ಅದೇ ಸ್ಥಳದಲ್ಲಿ ವಾಸ್ತವ್ಯ ಇರುವುದರಿಂದ ಅವರಿಗೂ ಸೋಂಕು ತಗಲುತ್ತಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಕೆಎಸ್‍ಆರ್ಪಿ ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಿಭಾಗದ ಜವಾಬ್ದಾರಿ ಹೊತ್ತಿರುವ ಎಡಿಜಿಪಿ ಅಲೋಕ್ ಕುಮಾರ್ ಕೆಎಸ್‍ಆರ್‍ಪಿ ತುಕಡಿಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News