×
Ad

ಐಸೋಲೇಷನ್ ವಾರ್ಡ್ ನಲ್ಲಿ ಹಸಿವಿನಿಂದ ಬಳಲುತ್ತಿರುವ ಸೋಂಕಿತರು: ಪೊಲೀಸ್ ಪೇದೆಯ ವಿಡಿಯೋ ವೈರಲ್

Update: 2020-06-22 22:00 IST

ಬೆಂಗಳೂರು, ಜೂ.22: ಕೋವಿಡ್-19 ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೂಕ್ತ ಸಮಯಕ್ಕೆ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿರುವ ಪೊಲೀಸ್ ಪೇದೆಯೋರ್ವರ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬೆಂಗಳೂರಿನ ಸರಕಾರಿ ಆಸ್ಪತ್ರೆಯೊಂದರಿಂದ ಪೊಲೀಸ್ ಪೇದೆ ಸೇರಿ ಹಲವು ಮಂದಿ ವಿಡಿಯೊ ಸೆರೆ ಹಿಡಿದು, ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಹಸಿವಾದರೂ ಊಟ ಕೊಡುತ್ತಿಲ್ಲ. ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತೆ ಇಲ್ಲ, ವೈದ್ಯರಂತೂ ಬರುವುದೇ ಇಲ್ಲ. ಅಷ್ಟೇ ಅಲ್ಲದೆ, ಎಲ್ಲರಿಗೂ ಒಂದೇ ಸ್ನಾನದ ಕೊಠಡಿ ಇದ್ದು, ಕೊರೋನ ಸೋಂಕು ಮತ್ತಷ್ಟು ಹಬ್ಬುವ ಆತಂಕ ಇದೆ ಎಂದು ವಿಡಿಯೊದಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News