×
Ad

ಸಿಎಂ ಮನೆ ಎದುರು ಬ್ಯಾನರ್ ಕಟ್ಟಿ ಭೇಟಿಗೆ ಅವಕಾಶಕ್ಕೆ ಆಗ್ರಹ: ವ್ಯಕ್ತಿ ಪೊಲೀಸ್ ವಶಕ್ಕೆ

Update: 2020-06-22 22:21 IST

ಬೆಂಗಳೂರು, ಜೂ.22: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದ ಮುಂದೆ ವ್ಯಕ್ತಿಯೊಬ್ಬ ಬ್ಯಾನರ್ ಕಟ್ಟಿ ಸಿಎಂ ಅವರನ್ನು ಭೇಟಿಯಾಗಲು ಧರಣಿ ನಡೆಸಲು ಮುಂದಾದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಮಂಜುನಾಥ್ ಎಂಬ ವ್ಯಕ್ತಿ ಬ್ಯಾನರ್ ಕಟ್ಟಿ ಸಿಎಂ ಭೇಟಿಗೆ ಪಟ್ಟು ಹಿಡಿದಿದ್ದರು. ಈತ ಗೃಹ ಕಚೇರಿ ಕೃಷ್ಣಾದ ಮುಂದೆ ಸಿಎಂ ಬಿಎಸ್‍ವೈಗೆ ವಾರ್ನಿಂಗ್ ಇರುವ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಯೇಸು ಕಡೆಯಿಂದ ನಾನು ಬಿಎಸ್‍ವೈರನ್ನು ಸಿಎಂ ಮಾಡಿದ್ದೇನೆ. ನನ್ನ ಪ್ರಾರ್ಥನೆಯಿಂದಲೇ ಬಿಜೆಪಿ ಸರಕಾರ ರಚನೆಯಾಗಿದೆ. ಸಿಎಂ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದು ಧರಣಿ ನಡೆಸಲು ಮುಂದಾಗಿದ್ದಾನೆ.

ಯಾವುದೇ ಅನುಮತಿ ಇಲ್ಲದೆ ಸಿಎಂ ಮನೆ ಮುಂದೆ ಬ್ಯಾನರ್ ಕಟ್ಟುವ ಹಾಗಿಲ್ಲ ಎಂದು ಸ್ಥಳಕ್ಕೆ ಬಂದ ಸಿಎಂ ಗೃಹ ಕಚೇರಿಯ ಪೊಲೀಸರು ಮಂಜುನಾಥ್ ಕಟ್ಟಿರುವ ಬ್ಯಾನರ್ ತೆರವುಗೊಳಿಸಿದರು. ಸಿಎಂ ಅಪಾಯಿಂಟ್‍ಮೆಂಟ್ ತೆಗೆದುಕೊಳ್ಳಲು ನಿಯಮ ಇದೆ. ಹೀಗೆಲ್ಲಾ ಬ್ಯಾನರ್ ಕಟ್ಟಬಾರದು ಎಂದು ಬುದ್ಧಿ ಹೇಳಿದರು. ಆದರೆ ಮಾತು ಕೇಳದ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News