ಲಾಕ್‍ಡೌನ್ ವೇಳೆ ಯಾರೊಬ್ಬರು ಹಸಿವಿನಿಂದ ಉಳಿದಿಲ್ಲ: ಸಚಿವ ಕೆ.ಗೋಪಾಲಯ್ಯ

Update: 2020-06-23 12:22 GMT

ಬೆಂಗಳೂರು, ಜೂ.23: ಕೋವಿಡ್-19 ಲಾಕ್‍ಡೌನ್ ಸಮಯದಲ್ಲಿ ಪಡಿತರ ಇಲ್ಲದವರಿಗೂ ಹಾಗೂ ವಲಸಿಗರಿಗೂ ಆಹಾರ ಧಾನ್ಯ ನೀಡಲಾಗಿದೆ. ಯಾರೊಬ್ಬರು ಹಸಿವಿನಿಂದ ಇರಲಿಲ್ಲವೆಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಮಂಗಳವಾರ ನಗರದ ಮಹಾಲಕ್ಷ್ಮಿ ಲೇಔಟ್‍ನಲ್ಲಿ 22 ಮಂದಿ ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ಹಾಗೂ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಕೊಟ್ಟ ಆಹಾರ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆಂಬ ಸಂತೃಪ್ತಿಯಿದೆ ಎಂದು ತಿಳಿಸಿದರು.

ಕೊರೋನ ಸೋಂಕಿನ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ರಾಜ್ಯದಲ್ಲಿರುವ ಪಡಿತರ ಹೊಂದಿದವರಿಗೂ, ಹೊಂದಿಲ್ಲದವರಿಗೂ ಪಡಿತರವನ್ನು ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲೂ ಯಾರೊಬ್ಬರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ್ದಾಗಿದೆ ಎಂದು ಅವರು ಹೇಳಿದರು.

ದ್ವಿಚಕ್ರ ವಾಹನಕ್ಕಾಗಿ ಅರ್ಜಿ ಸಲ್ಲಿಸಿದ ಇನ್ನು 15 ಮಂದಿ ವಿಶೇಷ ಚೇತನರಿಗೆ ಕೆಲವೇ ದಿನಗಳಲ್ಲಿ ವಾಹನಗಳನ್ನು ವಿತರಿಸಲಾಗುವುದೆಂದರು. ಈ ವೇಳೆ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ರಾಘವೇಂದ್ರ ಶೆಟ್ಟಿ, ಜಯರಾಮಯ್ಯ, ನಿಸರ್ಗ ಜಗದೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News