ಸೀಲ್‍ಡೌನ್ ಆಗಿದ್ದ ಠಾಣೆಯ ಇಬ್ಬರು ಪೊಲೀಸರಿಗೆ ಕೊರೋನ ಸೋಂಕು
Update: 2020-06-24 20:39 IST
ಬೆಂಗಳೂರು, ಜೂ.24: ಈಗಾಗಲೇ ಸೀಲ್‍ಡೌನ್ ಆಗಿದ್ದ ಪಶ್ಚಿಮ ವಿಭಾಗದ ಠಾಣೆಯೊಂದರ ಇಬ್ಬರು ಸಿಬ್ಬಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಪಶ್ಚಿಮ ವಿಭಾಗದ ಓರ್ವ ಹೆಡ್ ಕಾನ್‍ಸ್ಟೇಬಲ್ ಹಾಗೂ ಎಎಸ್ಸೈಗೆ ಕೊರೋನ ಪಾಸಿಟಿವ್ ಬಂದಿದ್ದು, ಸದ್ಯ ಇಬ್ಬರನ್ನೂ ಕೂಡ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೊದಲು ಇದೇ ಠಾಣೆಯ ಇಬ್ಬರಿಗೆ ಕೊರೋನ ಸೋಂಕು ದೃಢವಾಗಿತ್ತು.
ಈ ಸೋಂಕಿತ ಪೇದೆಗಳ ಸಂಪರ್ಕದಲ್ಲಿದ್ದ ಕಾರಣ ಕೆಲವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ಸದ್ಯ ಕೊರೋನ ಸೋಂಕು ದೃಢಪಟ್ಟಿರುವ ಕಾರಣ ಇತರೆ ಸಿಬ್ಬಂದಿಯಲ್ಲಿ ಆತಂಕ ನಿರ್ಮಾಣವಾಗಿದೆ.