×
Ad

ಬೆಂಗಳೂರು: ಕೊರೋನ ಸೋಂಕಿತರ ಸಂಖ್ಯೆ 1,678ಕ್ಕೆ ಏರಿಕೆ, ಒಟ್ಟು 78 ಮಂದಿ ಸಾವು

Update: 2020-06-24 22:28 IST

ಬೆಂಗಳೂರು, ಜೂ.24: ನಗರದಲ್ಲಿ ಬುಧವಾರ ಹೊಸದಾಗಿ 173 ಸೋಕಿತರು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,678ಕ್ಕೆ ಏರಿಕೆಯಾಗಿದೆ. ಐದು ಮಂದಿ ಮೃತರಾಗಿದ್ದು, 63 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು 1,124 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 78 ಜನರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಬುಧವಾರ 24 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 15,849 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ನಗರದಲ್ಲಿ ಬುಧವಾರ ಐವರು ಕೊರೋನ ಸೋಂಕಿತರು ಮೃತರಾಗಿದ್ದಾರೆ.

ಸೋಂಕಿತ ವ್ಯಕ್ತಿ ಪರಾರಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನ ಸೋಂಕಿತ ವ್ಯಕ್ತಿ ಪರಾರಿಯಾಗಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಸೋಂಕಿತ ಬುಧವಾರ ಬೆಳಗ್ಗೆ ಮಾರ್ಷಲ್‍ಗಳ ಬಳಿ ತಾನು ಹೊಟೇಲ್‍ಗೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. 

ನಂತರ ಕೊರೋನ ಸೋಂಕಿತನನ್ನು ಹುಡುಕಿಕೊಡುವಂತೆ ಆರೋಗ್ಯಾಧಿಕಾರಿಗಳು ಪೊಲೀಸರಿಗೆ ಮನವಿ ಮಾಡಿದ್ದರು. ಇದೀಗ ಪರಾರಿಯಾಗಿರುವ ವ್ಯಕ್ತಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೃತರ ವಿವರ

ರೋಗಿ ನಂ. 7,606, ಬೆಂಗಳೂರು ನಗರದ 59 ವರ್ಷದ ಮಹಿಳೆ. ವಿಷಮ ಶೀತ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಜೂ.10 ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹ ಸಮಸ್ಯೆ ಹೊಂದಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಜೂ.24 ರಂದು ಸಾವನ್ನಪ್ಪಿದ್ದರು.

ರೋಗಿ ನಂ. 7,816, ಬೆಂಗಳೂರು ನಗರದ 54 ವರ್ಷದ ಮಹಿಳೆ. ವಿಷಮ ಶೀತ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾರಣದಿಂದ ಜೂ.17 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂ.23 ರಂದು ಸಾವನ್ನಪ್ಪಿದ್ದರು.

ರೋಗಿ ನಂ. 9961, ಬೆಂಗಳೂರಿನ 70 ವರ್ಷದ ವೃದ್ಧೆ. ವಿಷಮ ಶೀತ ಜ್ವರದ ಲಕ್ಷಣಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಾಖಲಾದ ದಿನವೇ ವೃದ್ಧೆ ಸಾವನ್ನಪ್ಪಿದ್ದಾರೆ.

ರೋಗಿ ನಂ. 9962, ಬೆಂಗಳೂರಿನ 50 ವರ್ಷದ ಮಹಿಳೆ. ವಿಷಮ ಶೀತ ಜ್ವರದ ಲಕ್ಷಣಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.21ರಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಾಖಲಾದ ದಿನವೇ ಮಹಿಳೆ ಸಾವನ್ನಪ್ಪಿದ್ದಾರೆ.

ರೋಗಿ ನಂ. 9966, ಬೆಂಗಳೂರಿನ 68 ವರ್ಷದ ವೃದ್ಧೆ. ವಿಷಮ ಶೀತ ಜ್ವರದ ಲಕ್ಷಣಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಾಖಲಾದ ದಿನವೇ ವೃದ್ಧೆ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News